ಕುಂಬಳೆ- ಏಕಾಹ ಭಜನಾ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Upayuktha
0


 

ಕುಂಬಳೆ : ಕುಂಬಳೆ ರೈಲು ನಿಲ್ದಾಣ ಸಮೀಪದಲ್ಲಿರುವ ಸದ್ಗುರು ಶ್ರೀ ನಿತ್ಯಾನಂದ ಸ್ವಾಮೀಜಿ ಮಠದ ಏಕಾಹ ಭಜನೆಯ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಮಠದ ಪರಿಸರದಲ್ಲಿ ನಡೆಯಿತು.

ಸಮಿತಿಯ ಗೌರವಾಧ್ಯಕ್ಷ ಕೆ.ವಿ.ಶಿವರಾಮ ಅವರು ಹಿರಿಯ ಸಾಹಿತಿ, ಪತ್ರಕರ್ತ ಮಲಾರ್‌ ಜಯರಾಮ ರೈ ಅವರಿಗೆ ಪತ್ರಿಕೆಯನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ  ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಏಕಾಹ ಭಜನೆಯ 75ನೇ ವರ್ಷದ ಅಮೃತ ಮಹೋತ್ಸವದ ಪ್ರಯುಕ್ತ ಅಕ್ಟೋಬರ್‌ 29ರಿಂದ ನವೆಂಬರ್‌ 12ರವರೆಗೆ 48 ದಿನಗಳ ಮಂಡಲ ಭಜನೆ, ನ.13ರ ಬೆಳಿಗ್ಗೆ 6.44ರಿಂದ 15ರ ಬೆಳಿಗ್ಗೆ 6.44ರವರೆಗೆ ಏಕಾಹ ಭಜನೆಯು ವೇದಬ್ರಹ್ಮ ಕೆ.ಎಸ್‌.ನಿತ್ಯಾನಂದ ಸ್ವಾಮೀಜಿ ಚಿಕ್ಕಮಗಳೂರು ಇವರ ಆಶೀರ್ವಾದದೊಂದಿಗೆ ನಡೆಯಲಿದೆ.


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top