ಅವಕಾಶಗಳ ಹುಡುಕಾಟವಾಗಬಾರದು, ಉತ್ಪಾದನೆಯಾಗಬೇಕು: ಪ್ರೊ. ಪಿ. ಎಸ್‌ ಯಡಪಡಿತ್ತಾಯ

Upayuktha
0

                                                        

ಮಂಗಳೂರು: ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ(UEIGB) ಹಾಗೂ ತರಬೇತಿ ಮತ್ತು ನಿಯೋಜನಾ ಘಟಕ(UTPC)ವತಿಯಿಂದ, ಒಪ್ಟಮ್‌ಎ ಸಬ್ಸಿಡರಿ ಆಫ್‌ ಯುನೈಟೆಡ್‌ ಹೆಲ್ತ್‌ ಗ್ರೂಪ್‌, ಬೆಂಗಳೂರು ಇವರ ಸಹಯೋಗದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನ ಅಭ್ಯರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ  ಶುಕ್ರವಾರ ಕ್ಯಾಂಪಸ್‌ ಸೆಲೆಕ್ಷನ್‌ ಮತ್ತು 5 ವಾರಗಳ ವೈದ್ಯಕೀಯ ಕೋಡಿಂಗ್‌ ತರಬೇತಿಗೆ ಚಾಲನೆ ನೀಡಲಾಯಿತು. 

ಒಪ್ಟಮ್‌ನ ಉಪಾಧ್ಯಕ್ಷ ಒರಿವಿಲ್ ಜೇಮ್ಸನ್‌ ಡಿಸೋಜ  ಕಾರ್ಯಕ್ರಮ ಉದ್ಘಾಟಿಸಿ,  ಕಂಪನಿಯ ಕಾರ್ಯನಿರ್ವಹಣೆಯನ್ನು ವಿವರಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ,  ಉತ್ತಮ ಶಿಕ್ಷಣ ಮತ್ತು ಉದ್ಯೋಗ ಜೀವನದ ಪ್ರಮುಖ ಘಟ್ಟಗಳು. ಒಬ್ಬ ವ್ಯಕ್ತಿಯು ಸಮರ್ಥನಾಗಲು ಇಚ್ಛೆ, ಜ್ಞಾನ, ವರ್ತನೆ ಮತ್ತು ಮೌಲ್ಯಗಳನ್ನು ಹೊಂದಿರಬೇಕು . ಅವಕಾಶಗಳ ಹುಡುಕಾಟವಾಗಬಾರದು, ಉತ್ಪಾದನೆಯಾಗಬೇಕು ಎಂದು ಅಬಿಪ್ರಾಯಪಟ್ಪರು.

ಕಾರ್ಯಕ್ರಮದಲ್ಲಿ ಯುಇಐಜಿಬಿ ಉಪಮುಖ್ಯಸ್ಥ ಎಸ್. ಜೆ. ಹೇಮಚಂದ್ರ, ಮತ್ತು ಐಕ್ಯೂಎಸಿಯ ಉಪನಿರ್ದೇಶಕಿ ಪ್ರೊ. ಮೋನಿಕಾ ಸದಾನಂದ ಉಪಸ್ಥಿತರಿದ್ದರು. ಯುಇಐಜಿಬಿಯ‌ ಮತ್ತು ಯುಟಿಪಿಸಿಯ  ಮುಖ್ಯಸ್ಥ ಪ್ರೊ. ಕೆ. ಎಸ್.‌ಜಯಪ್ಪ ಅತಿಥಿಗಳನ್ನು ಸ್ವಾಗತಿಸಿ, ಯುಟಿಪಿಸಿಯ ಯೋಜನಾಧಾರಿತ ಸಲಹೆಗಾರ್ತಿ ಶಾರದಾ ಹೆಚ್‌. ಸೋಮಯಾಜಿ ವಂದಿಸಿದರು.

ಈ ಕಂಪನಿಯಲ್ಲಿ ಸುಮಾರು 10 ಸಾವಿರಗಳಷ್ಟು ಉದ್ಯೋಗಾವಕಾಶಗಳಿದ್ದು, ಮೊದಲು ಸುತ್ತಿನಲ್ಲಿ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತಿದೆ. ನಂತರ ಆಯ್ಕೆಯಾದ ಅಭ್ಯರ್ಥಿಗಳಿಗೆ 5 ವಾರಗಳ ತರಬೇತಿ ನೀಡಿ ಉದ್ಯೋಗವನ್ನು ನೀಡಲಾಗುತ್ತದೆ. ಒಟ್ಟು 180 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top