ಗಾಂಧೀಜಿಯ ತತ್ವಾದರ್ಶಗಳು ಪ್ರೇರಣೆಯಾಗಲಿ: ಡಾ. ಅನಸೂಯ ರೈ

Upayuktha
0

ವಿವಿ ಕಾಲೇಜು: ಗಾಂಧಿ ಜಯಂತಿ ಆಚರಣೆ, ಎನ್ಎನ್ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ   




ಮಂಗಳೂರು: ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಾರರು ತಮ್ಮ ಜೀವವನ್ನು ತೆತ್ತಿದ್ದಾರೆ, ಅಂತಹ ಮಹನೀಯರಲ್ಲಿ ಗಾಂಧೀಜಿಯ ತತ್ವ, ಆದರ್ಶಗಳೇ ಆಸ್ತಿಯಾಗಿವೆ. ಅವರ ಉತ್ತಮ ವಿಚಾರಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು, ಎಂದು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ  ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ವತಿಯಿಂದ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ  ಭಾನುವಾರ ನಡೆದ "ಗಾಂಧಿ ಜಯಂತಿ " ಕಾರ್ಯಕ್ರಮದಲ್ಲಿ  ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು, ಗಾಂಧಿಯ ಇಚ್ಛೆಯಂತೆ ರಾಮರಾಜ್ಯ, ಸ್ವಚ್ಛ ಭಾರತದ ಕಲ್ಪನೆ ಇಂದಿನ ವಿದ್ಯಾರ್ಥಿಗಳಲ್ಲಿ ಮೂಡಲಿ, ಎಂದರು.


ಎನ್. ಎಸ್.ಎಸ್.ನ ಯೋಜನಾಧಿಕಾರಿ ಡಾ.ಸುರೇಶ್  ಅತಿಥಿಗಳನ್ನು ಸ್ವಾಗತಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿ ಶಿವಪ್ರಸಾದ್  ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಬಿ. ಎಸ್ಸಿ.ವಿಭಾಗದ ವಿದ್ಯಾರ್ಥಿನಿ ಯಶಸ್ವಿ  ಪ್ರಾರ್ಥಿಸಿ, ಎನ್.ಎಸ್.ಎಸ್.ನ ಯೋಜನಾಧಿಕಾರಿ ಡಾ. ಗಾಯತ್ರಿ.ಎನ್   ಧನ್ಯವಾದ ಸಮರ್ಪಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮವೂ ನಡೆಯಿತು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top