ಕನ್ನಡ ಸಾಹಿತ್ಯ ಯಕ್ಷಗಾನ ಮತ್ತು ರಂಗಭೂಮಿಗೆ ಡಾ: ಶಿವರಾಮ ಕಾರಂತರ ಕೊಡುಗೆ ಸ್ಮರಣೀಯ

Upayuktha
0

                                                            

ಮಂಗಳೂರು : ಕನ್ನಡ ಸಾಹಿತ್ಯ ಪರಿಷತ್‌  ಮಂಗಳೂರು ತಾಲೂಕು ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ  ಡಾ. ಶಿವರಾಮ ಕಾರಂತ ಇವರ 120ನೇ ಪುಣ್ಯ ಜಯಂತಿಯನ್ನು ಆಚರಿಸಲಾಯಿತು. 

ಕನ್ನಡ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷ  ಡಾ. ಮಂಜುನಾಥ ರೇವಣ್‌ಕರ್‌ ಅವರು ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು. ಬಳಿಕ  ಅವರು ಮಾತನಾಡಿ,  ಡಾ. ಶಿವರಾಮ ಕಾರಂತ ಅವರ ಸೇವೆ ಅತ್ಯಮೂಲ್ಯ. ಇವರ ಸಾಹಿತ್ಯ, ಯಕ್ಷಗಾನ ಸೇವೆಗೆ ಅವರು ಹಾಕಿದ ಆದರ್ಶಗಳನ್ನು ಇಂದಿನ ಯುವಕರು ಪಾಲಿಸಿದಲ್ಲಿ ಸುಭೀಕ್ಷವಾದ ಸಮಾಜ ನಿಮಾರ್ಣವಾಗಲು ಸಾಧ್ಯವಿದೆ ಎಂದರು. 

ಈ ಸಂದರ್ಭ ಗೌರವ ಗೌರವ ಕಾರ್ಯದರ್ಶಿ ಗಣೇಶ್‌ ಪ್ರಸಾದ್‌ ಹಾಗೂ  ಡಾ. ಮುರಲೀ ಮೋಹನ್‌ ಚೂಂತಾರು,  ಕಸಾಪದ ಕಾರ್ಯಕಾರಿ ಸಮಿತಿಯ ಸದಸ್ಯ ಬಿ. ಕೃಷ್ಣಪ್ಪ ನಾಯ್ಕ್‌, ಡಾ: ಮೀನಾಕ್ಷಿ ರಾಮಚಂದ್ರ ಉಪಸ್ಥಿತರಿದ್ದರು.   ಕೋಶಾಧಿಕಾರಿ ಎನ್‌.ಸುಬ್ರಾಯ ಭಟ್‌ ವಂದಿಸಿದರು.  



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top