ಕವನ: ಹೆಡೆಯಾಡುವ ದ್ವಂದ್ವ ಭಾವ

Upayuktha
0

ಮೊನ್ನೆಯಷ್ಟೆ ನಡೆದ ಹಬ್ಬ

ಇಂದು ಬೆಳಗಿನ ದೀವಿಗೆಗೆ

ಕಣ್ಣಾಗಿ ಉದಯಿಸುತ ಬಿಂಬ

ತೋರುವ  ನಿತ್ಯ ಪರಿಧಿಗೆ

ಮನವ ಗೆಲ್ಲುವ ಛಲವಿದೊಂದೇ

ಮುಂದೆ ಹಾದಿ ನೂರಿವೆ

ಬದುಕು ಬನ್ನವೆ ಭಿನ್ನವಾಗಿದೆ

ನಿಷ್ಕಳ ಪುಷ್ಟ ಬಂಧುವೆ //


ನಡೆವ ಹಾದಿ ಸವೆಯದೆಂದೂ

ಕಾಲವೇ ಕೂತು ಕೊಂಡು

ಸ್ವಪ್ನದ ತೆರದಿ ಕಂಡು ಕೊಂಡು

ಜಗವನೇ ಹಿಂದಿಕ್ಕಿತು ಇಂದು

ಅನಿಯಮಿತ ಅನಿರೀಕ್ಷಿತ ತಿರುವು

ಬೆಳಕಿನುದ್ದಕೂ  ಹೆಜ್ಜೆ ಹಾಕುತ

ಕತ್ತಲ ಭ್ರಮೆ ಹೆಚ್ಚಿಸಿದವು

ನಿತ್ಯ ಮಾತಿನ ನಗೆಯ ಬೆಳಕಲಿ //


ಭಯವೇ ಇರದಂತ ಬದುಕಿಗೆ

ನೂರು ದಾರಿಗಳ ತಿರುವಿದೆ

ನಂದಿ ಹೋಗದಂತ ಬತ್ತಿಯ

ಉತ್ಸಾಹಕೆ ತೈಲವೇ ಸಿದ್ದಿಸಿದೆ

ಧಾರೆ ಧಾರೆ ಪ್ರೀತಿಯೊಸಗೆ

ದಾರಿ ಸೃಷ್ಟಿಗೆ ಎರವಾಗಿದೆ

ಧರೆಯೊಳಿರುವ ಧಾವಂತಕೆ

ದ್ವಂದ್ವ ಭಾವ ಹೆಡೆಯಾಡುತಿದೆ//


✍️ಮಲ್ಲಿಕಾ ಜೆ ರೈ  ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Tags

Post a Comment

0 Comments
Post a Comment (0)
To Top