
ಇಂದು ಚುನಾವಣೆ ಹತ್ತಿರ ಬಂತೂ ಅಂದ ತಕ್ಷಣವೇ ವಿಪಕ್ಷಗಳ ಬತ್ತಳಿಕೆಯಲ್ಲಿ ಸದಾ ಸಿದ್ಧವಿರುವ ಅಸ್ತ್ರ ಗಳೆಂದರೆ ಭ್ರಷ್ಟಾಚಾರ ನಿರುದ್ಯೋಗ ಮತ್ತು ಬೆಲೆ ಏರಿಕೆ. ಒಂದು ವಿಪರ್ಯಾಸವೆಂದರೆ ಅಂದು ಇದೇ ವಿಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಇದನ್ನೆಲ್ಲಾ ಎದ್ದು ಬಿದ್ದು ಮೆಂದು ಬಂದವರು ಆಗ ಅವರಿಗೆ ಇದೇ ಮೂರು ವಿಷಯಗಳ ಬಗ್ಗೆ ನೆನಪಾಗಲೇ ಇಲ್ಲ. ಎಲ್ಲವೂ ಸಿಹಿ ಪ್ರಪಂಚವಾಗಿ ಕಂಡಿತ್ತು ಯಾಕೆಂದರೆ ಯಾವುದೇ ಸಿಹಿ ವಸ್ತುವನ್ನು ಮೇಯುವಾಗ ಇದೆಲ್ಲಾ ನೆನಪಾಗುವುದೇ ಇಲ್ಲ. ನೆನಪಾಗುವುದು ಯಾವಾಗ ಕೇಳಿದರೆ ಮೇಯುವ ಅವಕಾಶ ತಪ್ಪಿ ಹೇೂದಾಗ. ಅಂದರೆ ಇಲ್ಲಿ ಯಾರೂ ಸಾಚರಲ್ಲ ಅನ್ನುವುದನ್ನು ಪ್ರಬುದ್ಧ ಮತದಾರರ ಅರಿತಾಗ ಈ ಮೂರು ಅಸ್ತ್ರಗಳನ್ನು ತೆಗೆಯಲು ಮೂರನೇ ಶಕ್ತಿಯನ್ನು ಹುಡುಕುವ ಅನಿವಾರ್ಯತೆ ಬರುತ್ತದೆ.
ಇಂದು ಇದೇ ವಿಪಕ್ಷಗಳು ಆಡಳಿತ ನಡೆಸುವ ಕಾಲದಲ್ಲಿ ಭ್ರಷ್ಟಾಚಾರ ನಿರುದ್ಯೋಗ ಬೆಲೆ ಏರಿಕೆ ಇರಲಿಲ್ಲವೇ? ಖಂಡಿತವಾಗಿಯೂ ಇತ್ತು. ಅಂದರೆ ಈ ಮೂರು ಮೂಲ ಭೂತ ಸಮಸ್ಯೆಗಳು ಕೇವಲ 2014 ಅನಂತರದಲ್ಲಿ ಹುಟ್ಟಿಕೊಂಡಿದ್ದಾ? ಮೊದಲು ನಮ್ಮೆಲ್ಲರ ರಸ್ತೆ ಹೆದ್ದಾರಿಗಳು ಸುವರ್ಣ ಚತುಷ್ಪಥಗಳಾಗಿದ್ದವಾ? ಭ್ರಷ್ಟಾಚಾರ ಮುಕ್ತ ರಾಮರಾಜ್ಯವಾಗಿತ್ತಾ? ಗ್ಯಾಸ್ ಪೆಟ್ರೋಲ್ ಗಳನ್ನು ರಸ್ತೆಯ ಬದಿಯಲ್ಲಿ ಇಟ್ಟು ಪುಕ್ಕಟೆಯಾಗಿ ಮಾರುತ್ತಿದ್ದರಾ? ಮನೆ ಮನೆಯಲ್ಲಿ ಉದ್ಯೋಗ ಸಮೃದ್ಧಿ ಭರಿತವಾಗಿ ತುಂಬಿ ತುಳುಕುತ್ತಿತ್ತಾ? ಇಂದಿನ ಪ್ರಬುದ್ಧ ಮತದಾರನಿಗೆ ಈ ಎಲ್ಲಾ ಸತ್ಯದ ವಿಚಾರಗಳು ಗೊತ್ತಿದೆ. ಈ ವಿಪಕ್ಷಗಳಿಗೆ ಚುನಾವಣಾ ಕಾಲದಲ್ಲಿ ಆಡಳಿತ ರೂಢ ಪಕ್ಷಗಳನ್ನು ಬೀದಿಗೆ ತಂದು ನಿಲ್ಲಿಸಲು ವಿಷಯಗಳು ಬೇಕಲ್ಲಾ, ಹಾಗಾಗಿ ರಾಜಕೀಯ ಪಕ್ಷಗಳಿಗೆ ಸುಲಭವಾಗಿ ಸಿಗುವ ಮೂರು ಪದಗಳೆಂದರೆ "ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ" ಈ ಮೂರು ವಿಷಯಗಳನ್ನು ಸುಲಭವಾಗಿ ಲೆಕ್ಕ ಹಾಕಲು ಸಾಧ್ಯವಾಗದ ಆಲೇೂಚನೆಗೂ ನಿಲುಕದ ವಿಚಾರಗಳು ಮಾತ್ರವಲ್ಲ ಜನರ ಎದುರು ಬೊಬ್ಬೆ ಹಾಕಲು ಸಿಗುವ ಸುಲಭ ಸರಳವಾದ ಪದಪುಂಜಗಳು. ಹಾಗಾಗಿ ಪ್ರತಿಯೆಾಂದು ಚುನಾವಣಾ ಪವ೯ಕಾಲದಲ್ಲಿ ಹುಟ್ಟಿಕೊಂಡು ಮತ್ತೆ ಸಾವನಪ್ಪುವ ಪದಗಳು ಅಷ್ಟೇ.
ಹಾಗಾಗಿಯೇ ಇಂದು ಪ್ರಬುದ್ಧ ಮತದಾರರ ಈ ಮೂರು ವಿಚಾರಗಳನ್ನು ಬಿಟ್ಟು ಇನ್ನೇನಾದರೂ ವಿಷಯಗಳು (issues) ನಮ್ಮ ರಾಜಕೀಯ ಪಕ್ಷಗಳ ಬಾಯಿಯಿಂದ ಬರಬಹುದಾ ಅನ್ನುವುದನ್ನು ಕುತೂಹಲದಿಂದ ಕಾಯುತ್ತಾ ಇರುತ್ತಾನೆ. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಬೇರೆ ವಿಷಯಗಳು ಸಿಗದಾಗ ಹಳೆಯ ಗಂಡನ ಪಾದವೇ ಗತಿ ಅನ್ನುವ ತರದಲ್ಲಿ ಭ್ರಷ್ಟಾಚಾರ ನಿರುದ್ಯೋಗ ಬೆಲೆ ಏರಿಕೆಗೆ ಜೇೂತು ಬಿದ್ದಿರುತ್ತಾವೆ. ಅಷ್ಟೇ ಅಲ್ವೇ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ