ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಗಣಪತಿ ಹವನ ಸಹಿತ ಶಾರದಾ ಪೂಜೆ

Upayuktha
0


ಪುತ್ತೂರು : ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ಎಂದೂ ಕೈ ಬಿಡುವುದಿಲ್ಲ.  ಧರ್ಮ ರಕ್ಷಕರು ದೇವರ ಕೃಪೆಗೆ ಖಂಡಿತಾ  ಪಾತ್ರರಾಗುತ್ತಾರೆ. ವಿದ್ಯಾವಂತರಿಗೆ ವಿನಯವು ಭೂಷಣವಾಗಿರುತ್ತದೆ. 

ಮುಖ್ಯವಾಗಿ ಬುದ್ಧಿಯ ಜೊತೆಗೆ ಸದ್ಗುಣಗಳನ್ನು ಪ್ರಾಪ್ತಿ ಮಾಡಿಕೊಳ್ಳಬೇಕು. ಅಂಬಿಕಾ ಸಂಸ್ಥೆ ಸ್ಥಾಪನೆಯಾದಂದಿನಿಂದ ಭಗವಂತನಿಗೆ ಸಲ್ಲಬೇಕಾದ ಎಲ್ಲಾ ಪೂಜೆ, ಹವನಗಳು ನೆರವೇರುತ್ತಾ ಬರುತ್ತಿದೆ.  ಈ ವಿದ್ಯಾಲಯ 

ಪುಣ್ಯಸ್ಥಳ, ಈ ಕರ್ಮವೃಕ್ಷದಲ್ಲಿ ಸತ್ಫಲಗಳು ಲಭಿಸುತ್ತಿರುತ್ತದೆ. ಇಲ್ಲಿ ಕಲಿತ ವಿದ್ಯಾರ್ಥಿವೃಂದ ಯಶಸ್ಸಿನ ಶಿಖರವೇರಿದೆ.  ಇದಕ್ಕೆ ಕಾರಣಕರ್ತರಾದ ಸ್ಥಾಪಕರನ್ನೂ ಇಲ್ಲಿ ಸೇವೆಗೈಯುವ ಎಲ್ಲರನ್ನೂ ಶ್ರೀ ಮಹಾಗಣಪತಿ, 

ವೀಣಾಪಾಣಿ ಶಾರದಾಮಾತೆ ಹರಸಲಿ ಸಮೃದ್ಧಿಯನ್ನು ಎಲ್ಲರಿಗೂ ದಯ ಪಾಲಿಸಲಿ ಎಂದು ವೇದಮೂರ್ತಿ ಜಗದೀಶ ಭಟ್‌  ಅವರು ಶ್ರೀ ಮಹಾಗಣಪತಿ ದೇವರನ್ನು ಪ್ರಾರ್ಥಿಸಿದರು.

ನಟ್ಟೋಜ ಫೌಂಡೇಶನ್‌ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನವರಾತ್ರಿ ಉತ್ಸವಾಚರಣೆಯ ಅಂಗವಾಗಿ  ಶ್ರೀ ಮಹಾಗಣಪತಿ ಹವನ, ಶಾರದಾ ಪೂಜೆ, ಪುಸ್ತಕ ಪೂಜೆಯ

 ಸುಮುಹೂರ್ತದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. 

ನಟ್ಟೋಜ ಫೌಂಡೇಶನ್‌  ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಅವರ ಧರ್ಮಪತ್ನಿ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಪೂಜಾಕಾರ್ಯದಲ್ಲಿ ಭಾಗಿಗಳಾದರು.

ಕಾಲೇಜಿನ ಪ್ರಾಚಾರ್ಯ ಸತ್ಯಜಿತ್‌ ಉಪಾಧ್ಯಾಯ, ಆಡಳಿತ ಮಂಡಳಿ ಸದಸ್ಯ ಸುರೇಶ್‌ ಶೆಟ್ಟಿ, ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top