ಮಂಗಳೂರು: ನಗರದ ಖ್ಯಾತ ಎಸ್‌ಸಿಎಸ್ ಆಸ್ಪತ್ರೆಯ ಸಂಸ್ಥಾಪಕ ಚೇರ್ಮನ್ ರಾದ ದಿವಂಗತ ಸೊರಕೆ ಚಂದ್ರಶೇಖರ್ ಅವರ 120ನೇ ಜಯಂತಿಯ ಪ್ರಯುಕ್ತ ಅ.22ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 5:30ರಿಂದ ವಯಲಿನ್ ವಾದನ ಕಚೇರಿ ಆಯೋಜಿಸಲಾಗಿದೆ.
ಸಂಗೀತ ಕಲಾನಿಧಿ, ಶೃಂಗೇರಿ ಆಸ್ಥಾನ ವಿದುಷಿ, ಪದ್ಮಶ್ರೀ ಎ. ಕನ್ಯಾಕುಮಾರಿ ಅವರು ವಯಲಿನ್ ವಾದನ ನಡೆಸಲಿದ್ದಾರೆ. ಪಕ್ಕವಾದ್ಯದಲ್ಲಿ ಸಾಯಿ ರಕ್ಷಿತ್ (ವಯಲಿನ್), ಡಾ. ಪತ್ರಿ ಸತೀಶ್ ಕುಮಾರ್ (ಮೃದಂಗ), ತಿರುಚ್ಚಿ ಕೆ.ಆರ್. ಕುಮಾರ್ (ಘಟಂ) ಸಾಥ್ ನೀಡಲಿದ್ದಾರೆ.
ವಿದುಷಿ ಎ. ಕನ್ಯಾಕುಮಾರಿ ಅವರು ದೀಪೋಜ್ವಲನದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಸಂಗೀತ ಪರಿಷತ್ ಅಧ್ಯಕ್ಷ ಸಾಯಿ ಪ್ರದೀಪ್ ಎಂ.ವಿ, ಸಂಗೀತ ಭಾರತಿ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್. ಸಾಯಿರಾಮ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಎಸ್‌ಸಿಎಸ್ ಆಸ್ಪತ್ರೆಯ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕರಾದ ಡಾ. ಜೀವರಾಜ್ ಸೊರಕೆ ಎಂ.ಎಸ್ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ