ಮಂಗಳೂರು : ನಗರದ ಮೇರಿಹಿಲ್ ನಲ್ಲಿರುವ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಅ.20ರಂದು ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆ ನಡೆಯಲಿರುವುದು.
ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ಪಡೆ ಚೀಫ್ ವಾರ್ಡನ್ ಡಾ.ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮುಂಬರುವ ಚುನಾವಣೆಗೆ ಗೃಹರಕ್ಷಕರನ್ನು ನಿಯೋಜಿಸುವ ಕುರಿತು ಹಾಗೂ ಹೊಸ ಗೃಹರಕ್ಷಕರನ್ನು ನೊಂದಾಯಿಸುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.