ಐದು ಮಂದಿ ಗಣ್ಯರಿಗೆ ಕಾಂತಾವರ ಕನ್ನಡ ಸಂಘದಿಂದ ಪ್ರಶಸ್ತಿ ಘೋಷಣೆ

Upayuktha
0

ಕಾಂತಾವರ: ಕನ್ನಡ ಸಂಘದ ಐದು ಪ್ರಶಸ್ತಿಗಳು ಮತ್ತೆ ಘೋಷಣೆಯಾಗಿದ್ದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬಾಲಕೃಷ್ಣ ಆಚಾರ್ ಮತ್ತು ಅವರ ಪತ್ನಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವಾಣಿ ಬಿ. ಆಚಾರ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ 'ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ'ಯನ್ನು ಖ್ಯಾತ ಯಕ್ಷಗಾನದ ಅರ್ಥದಾರಿ, ಪ್ರಸಂಗಕರ್ತ, ಯಕ್ಷಗಾನ ವಿರ್ಮಶಕ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀಧರ ಡಿ.ಎಸ್ ಅವರಿಗೆ, ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ 'ಮಂಜನಬೈಲ್ ರಂಗ ಸನ್ಮಾನ್' ಪ್ರಶಸ್ತಿಯನ್ನು ಧಾರವಾಡದ ಹಿರಿಯ ರಂಗಕರ್ಮಿಗಳಾದ ಶ್ರೀ ಹರ್ಷವರ್ಧನ ಹನುಮಂತರಾವ್ ಡಂಬಳ ಅವರಿಗೆ ನೀಡಲು ನಿರ್ಧರಿಸಲಾಗಿದೆ.


ಡಾ.ನಾ.ಮೊಗಸಾಲೆ ಕುಟುಂಬಿಕರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ 'ಕಾಂತಾವರ ಸಾಹಿತ್ಯ ಪ್ರಶಸ್ತಿ'ಯನ್ನು ಮೂಡುಬಿದಿರೆಯ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಸಂಶೋಧಕ, ಸಾಹಿತಿ ಡಾ. ಪುಂಡಿಕಾ ಗಣಪಯ್ಯ ಭಟ್ ಅವರಿಗೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಧ್ಯಾಪಿಕೆ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಈಶ್ವರ ಮಂಗಲ ಅವರ ದತ್ತಿನಿಧಿಯ 'ಕಾಂತಾವರ ಸಾಹಿತ್ಯ ವಿಮರ್ಶಾ' ಪ್ರಶಸ್ತಿಯನ್ನು ಸಾಹಿತ್ಯ ವಿಮರ್ಶೆ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಡಾ.ಸುಭಾಷ್ ರಾಜಮಾನೆ ಅವರಿಗೆ ನೀಡುವುದೆಂದು ನಿರ್ಣಯಿಸಲಾಗಿದೆ. ಪ್ರಶಸ್ತಿಯು ತಲಾ 10,000 ರೂಪಾಯಿಗಳ ಗೌರವ ಸಂಭಾವನೆ, ತಾಮ್ರ ಪತ್ರ ಮತ್ತು ಸನ್ಮಾನಗಳನ್ನು ಒಳಗೊಂಡಿದೆ.


ಇದರ ಜೊತೆಗೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮೂವತ್ತಕ್ಕೂ ಹೆಚ್ಚಿನ ಕೃತಿಗಳನ್ನೂ ಪ್ರಕಟಿಸುವುದರೊಂದಿಗೆ ಸಂಗೀತ, ನಾಟಕ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬೆಂಗಳೂರಿನ ಶ್ರೀ ಕೆ. ಚಂದ್ರಮೌಳಿ ಅವರಿಗೆ ಸಂಘದ ಪ್ರತಿಷ್ಠಿತ 'ವಾರ್ಷಿಕ ಗೌರವ ಪ್ರಶಸ್ತಿ'ಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ನವಂಬರ್ 1ರಂದು ನಡೆಯುವ 'ಕಾಂತಾವರ ಉತ್ಸವ'ದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಅಧ್ಯಕ್ಷತೆಯಲ್ಲಿ ನಡೆಯುದೆಂದು ಸಂಘದ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top