ದೆಹಲಿ: ಇಂದು ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ 38ನೇ ವರ್ಷದ ಪುಣ್ಯ ತಿಥಿ. 1982ರ ಅಕ್ಟೋಬರ್ 31 ದೆಹಲಿಯ ಸಪ್ತರ್ ಜಂಗ್ ರೋಡ್ ನಲ್ಲಿ ಮರಣ ಹೊಂದಿದ್ದರು.
ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮೂಲಕ ತಮ್ಮ ನಮನ ಸಲ್ಲಿಸಿದ್ದು , ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.ಅಜ್ಜಿ, ನಾನು ನಿಮ್ಮ ಪ್ರೀತಿ ಮತ್ತು ಸಂಸ್ಕಾರ ಎರಡನ್ನೂ ನನ್ನ ಹೃದಯದಲ್ಲಿ ಹೊತ್ತಿದ್ದೇನೆ. ನೀನು ಯಾವ ಭಾರತಕ್ಕಾಗಿ ಪ್ರಾಣ ತ್ಯಾಗ ಮಾಡಿದಿಯೋ ಆ ಭಾರತವನ್ನು ನಾನು ಬಿಡುವುದಿಲ್ಲ, ಎಂದು ಬರೆದುಕೊಂಡಿದ್ದಾರೆ.
ಸೋನಿಯಾ ಗಾಂಧಿ, ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಮತ್ತಿತರ ಕಾಂಗ್ರೇಸ್ ನಾಯಕರು ಇಂದಿರಾ ಗಾಂಧಿಯವರ ಸ್ಮಾರಕದ ಬಳಿ ತೆರಳಿ ಪುಷ್ಪನಮನ ಸಲ್ಲಿಸಿದರು.