ಧಾರವಾಡ: ಶ್ರೀ ವಿಶ್ವೇಶತೀರ್ಥ ಪಬ್ಲಿಕ್ ಸ್ಕೂಲ್ ಗೆ ಶಿಲಾನ್ಯಾಸಶ್ರೀಪೇಜಾವರ ಮಠದ ಅಂಗಸಂಸ್ಥೆಯಾಗಿ ಧಾರವಾಡದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ವಿಶ್ವೇಶತೀರ್ಥ ಪಬ್ಲಿಕ್ ಸ್ಕೂಲ್ ಗೆ ಶನಿವಾರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸಿದರು.
ಹುಬ್ಬಳ್ಳಿ ಧಾರವಾಡ ಮಹಾಪೌರ ಈರೇಶ್ ಅಂಚಟಗೇರಿ, ಕಾರ್ಪೋರೇಟರ್ ಗಳಾದ ಶಿವು ಹಿರೇಮಠ್ ,ವಿಷ್ಣು ಕೊರ್ಲಹಳ್ಳಿ, ಜ್ಯೋತಿ ಪಾಟೀಲ್, ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಕೌಲಗೌಡ, ಗೌರವ ಕಾರ್ಯದರ್ಶಿ ಕೃಷ್ಣ ದೇಶಪಾಂಡೆ ಮೊದಲಾದವರಿದ್ದು ಶುಭ ಕೋರಿದರು. ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಭಟ್ ಸಹಕರಿಸಿದರು. ಡಾ ಸತ್ಯಮೂರ್ತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ