75 ವರ್ಷ ಮೇಲ್ಪಟ್ಟ ಎಸ್‍ಬಿಎಂ ಪಿಂಚಣಿದಾರರನ್ನು ಸನ್ಮಾನಿಸಲಾಯಿತು.
ಮಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ (ಎಸ್‍ಬಿಎಂ) ಪಿಂಚಣಿದಾರರ ಸಂಘಟನೆಯ 6ನೇ ತ್ರೈವಾರ್ಷಿಕ ಸಮ್ಮೇಳನ ಬೆಂಗಳೂರಿನಲ್ಲಿ ಅ.28ರಂದು ಹಮ್ಮಿಕೊಂಡಿದ್ದು, ಪೂರ್ವಭಾವಿಯಾಗಿ ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಎಸ್‍ಬಿಎಂ ಪಿಂಚಣಿದಾರರ ಸಮ್ಮೇಳನ ಶುಕ್ರವಾರ ಮಂಗಳೂರಿನ ಕೊಡಿಯಾಲ್‍ಬೈಲ್‍ನ ಶಾರದಾ ವಿದ್ಯಾಲಯ ಎದುರಿನ ಸಿಬಿಒಒ ಸಭಾಂಗಣದಲ್ಲಿ ನಡೆಯಿತು.
1995ರ ಅ.29ರಂದು ಸ್ಥಾಪಿಸಲ್ಪಟ್ಟ ಎಸ್‍ಬಿಎಂ ಪಿಂಚಣಿದಾರರ ಸಂಘಟನೆ ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಅತಿ ದೊಡ್ಡ ಸಂಘಟನೆ ಇದಾಗಿದೆ. ಎಸ್‍ಬಿಎಂ ತ್ರೈವಾರ್ಷಿಕ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ದೇಶದ 13 ಕಡೆಗಳಲ್ಲಿ ಎಸ್‍ಬಿಎಂ ಪಿಂಚಣಿದಾರರ ಸಮ್ಮೇಳನ ನಡೆಸಲಾಗುತ್ತಿದ್ದು, ಇದರಲ್ಲಿ ಸದಸ್ಯರ ಕುಂದುಕೊರತೆಗಳ ಬಗ್ಗೆ, ಅವರ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಸಂಘಟನೆ ನಡೆದು ಬಂದ ದಾರಿ, ನಡೆಸಿದ ಹೋರಾಟಗಳು ಮತ್ತು ಗಳಿಸಿದ ಸೌಲಭ್ಯಗಳ ಬಗ್ಗೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎನ್. ಪ್ರಸಾದ್ ವಿವರಿಸಿದರು.
ಸಿದ್ದಗಂಗಯ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. 75 ವರ್ಷ ಮೇಲ್ಪಟ್ಟ ಪಿಂಚಣಿದಾರರಾದ ಚಂದ್ರಶೇಖರ, ಸಂಜೀವ ಶೆಟ್ಟಿ, ಶಿವಪ್ಪ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಸುಕುಮಾರ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಮುಖ್ಯ ವ್ಯವಸ್ಥಾಪಕ ಯೋಗೇಶ್ ಕರ್ಕೇರ ವಂದಿಸಿದರು. ಗಣೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಾವಿತ್ರಿ ಪ್ರಾರ್ಥಿಸಿದರು. ದಿನೇಶ್ ಬೇಕಲ್ ಮತ್ತು ಅವರ ತಂಡದವರು ಸಂಯೋಜಿಸಿದ್ದರು. ಬೆಂಗಳೂರಿನಲ್ಲಿ ನಡೆಯಲಿರುವ 6ನೇ ತ್ರೈವಾರ್ಷಿಕ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ