ಬೆಂಗಳೂರು: ಗಾಂಧಿ ಬಜಾರ್ ಶ್ರೀ ವ್ಯಾಸರಾಜರ ಮಠದಿಂದ, ಚಾಮರಾಜಪೇಟೆ ಶ್ರೀಮನ್ಮಾಧ್ವ ಸಂಘದ ವರೆಗೆ ನಡೆಯಿತು. ಶ್ರೀ ಮಧ್ವಾಚಾರ್ಯರ ಮೂಲಮಹಾ ಸಂಸ್ಥಾನವಾದ ಶ್ರೀ ಮಾಧವತೀರ್ಥರ ಪರಂಪರೆಯ ತಂಬಿಹಳ್ಳಿ ಮಠದ ಶ್ರೀ ಶ್ರೀ ವಿದ್ಯಾಸಾಗರ ಮಾಧವತೀರ್ಥ ಶ್ರೀ ಪಾದಂಗಳವರು, ಮತ್ತು ಕಿರಿಯ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾವಲ್ಲಭ ಮಾಧವ ತೀರ್ಥ ಶ್ರೀ ಪಾದಂಗಳವರು ಶೋಭಾ ಯಾತ್ರೆಗೆ ಮಂಗಳಾರತಿ ಮಾಡುವ ಮುಖಾಂತರ ಚಾಲನೆ ಕೊಟ್ಟು, ಶೋಭಾ ಯಾತ್ರೆಯಲ್ಲಿ ಬಾಗವಹಿಸಿ ಭಕ್ತರನ್ನು ಆಶೀರ್ವದಿಸಿದರು.
ಸಭಾ ಕಾರ್ಯಕ್ರಮದಲ್ಲಿ ಮಧ್ವಾಚಾರ್ಯರ ಜೀವನ ಮತ್ತು ಉಪದೇಶದ ಕುರಿತು ಹಿರಿಯ ವಿದ್ವಾಂಸರಾದ ಡಾ.ಎಸ್ ಆರ್ ರಾಘವೇಂದ್ರ, ಹರಿದಾಸ ಸಾಹಿತ್ಯ ಮತ್ತು ಮಧ್ವಾಚಾರ್ಯರ ಕುರಿತು ಪ್ರಾಧ್ಯಾಪಕಿ ಡಾ. ವಾಣಿಶ್ರೀ ಗಿರೀಶ್, ಮಾಧ್ವರ ಕೊಡುಗೆಗಳು ಕುರಿತು ಸಂಸ್ಕೃತಿ ಚಿಂತಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡಿದರು.
ವಿ ಎಂಡಬ್ಲ್ಯೂ ಸಂಸ್ಥಾಪಕ ಅಧ್ಯಕ್ಷ ವೆಂಕೋಬ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀನಿವಾಸ ಜೋಷಿ ಅಧ್ಯಕ್ಷರು ಬೆಂಗಳೂರು ನಗರ ವಿಶ್ವ ಮಧ್ವಮತ ವೆಲ್ಫೇರ ಅಸೋಸಿಯೇಷನ್, ಚಾಮರಾಜಪೇಟೆ ಶ್ರೀಮನ್ ಮದ್ವ ಸಂಘದ ಅಧ್ಯಕ್ಷ ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ