ಮನೆ ಮನೆಗಳಲ್ಲಿ ಕಂಗೊಳಿಸುವ ದೀಪದ ವಾತಾವರಣ. ಎಲ್ಲೆಲ್ಲೂ ನೋಡಿದರೂ ಸಂಭ್ರಮದ ಸಡಗರವೇ ಸಡಗರ. ಕತ್ತಲೆ ತುಂಬಿದ ಬಾಳಿನಲ್ಲಿ ಸುಖ ತರುವ ಹಬ್ಬವೇ ದೀಪಾವಳಿ.
ಮುಂಜಾನೆಯ ಮಂಜಿನಲ್ಲಿ ಚಳಿಯ ವಾತಾವರಣದಲ್ಲಿ ಬೇಗನೆ ಎದ್ದು ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಳ್ಳುವ ಸಂತೋಷವೇ ಬೇರೆ. ನಂತರ ಅಮ್ಮ ಮಾಡಿಟ್ಟ ಅವಲಕ್ಕಿ ತಿಂದು ಅದಕ್ಕೆ ಬಾಳೆಹಣ್ಣುನ್ನು ಸೇರಿಸಿ ಚಪ್ಪರಿಸುವ ವಿಧಾನವೇ ಬೇರೆ. ತುಂಬಾ ಸಂತೋಷದಿಂದ ಕುಣಿದು ಕುಪ್ಪಳಿಸಿ ರಾತ್ರಿ ಯಾವಾಗ ಬರುತ್ತೆ ಎಂಬ ಖುಷಿ ಇನ್ನೊಂದೆಡೆ, ಮನೆಯ ಸುತ್ತಲೂ ದೀಪವನ್ನು ಹಚ್ಚಿಸಿ, ಪಟಾಕಿಯನ್ನು ಸಿಡಿಸಿ ಹಬ್ಬವನ್ನು ತುಂಬಾನೇ ವಿಜೃಂಣೆಯಿಂದ ಆಚರಿಸುತ್ತೇವೆ.
ನನ್ನ ನೆನಪಿನ ದೀಪಾವಳಿ
ದೀಪಾವಳಿ ಎಂದಾಕ್ಷಣ ಏನೋ ಮನಸ್ಸಿಗೆ ಒಂದು ಖುಷಿ. ಆದರೆ ದೀಪಾವಳಿ ಬಂತೆಂದರೆ ಮಕ್ಕಳಿಗೆ ಅದೆಲ್ಲಿಹದ ಖುಷಿಯೋ ಖುಷಿ. ನನ್ನ ನೆನಪಿನ ದೀಪಾವಳಿಯನ್ನು ನಾನು ಶಾಲಾ ಕಾಲೇಜುಗಳಲ್ಲಿ ಕಂಡಿದ್ದೇನೆ ಹಬ್ಬಗಳನ್ನು ಆಚರಿಸುವ ವಿಧಾನವನ್ನು ನೋಡಲು ತುದಿ ಕಾಲಿನಲ್ಲಿ ಕಾಯುತ್ತಿದ್ದೆವು. ದೀಪಾವಳಿ ವಿಶೇಷತೆಯ ಬಗ್ಗೆ ನಾಟಕ, ಕಿರು ನಾಟಕ ಇಂತಹದೆಲ್ಲವನ್ನು ಮಾಡುವ ಹಬ್ಬವನ್ನು ನಾವು ಶಾಲಾ ಕಾಲೇಜುಗಳಲ್ಲಿ ನೋಡಿ ಕೊಂಡು ಬಂದಿದ್ದೇವೆ. ಅದರಲ್ಲಿ ಕೂಡ ತಿಂಡಿ ತಿನಿಸುಗಳನ್ನು ಕೊಟ್ಟು ಬಾಯನ್ನು ಸಿಹಿ ಪಡಿಸಿ ಒಳ್ಳೆಯ ಮಾತುಗಳನ್ನು ಹಾಡಿ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳುವವರು ನಮ್ಮ ಶಿಕ್ಷಕರು. ಮತ್ತು ನಮ್ಮ ಸ್ನೇಹಿತರೆ ನನ್ನ ನೆನಪಿನ ಮತ್ತು ಅಚ್ಚುಮೆಚ್ಚಿನ ದೀಪಾವಳಿಯನ್ನು ನಾನು ತುಂಬಾ ವಿಜೃಂಭಣೆಯಿಂದ ನನ್ನ ಶಾಲಾ ದಿನಗಳಲ್ಲಿ ಆಚರಿಸುತಿದ್ದೆವು.
ಹಲವಾರು ರೀತಿಯಗಳಲ್ಲಿ ಪ್ರದರ್ಶನ ಮಾಡಿ ದೀಪಾವಳಿ ವಿಶೇಷತೆಯನ್ನು ನಾವು ತಿಳಿದುಕೊಂಡು ಅರ್ಥೈಸಿಕೊಂಡು ಬಂದಿದ್ದೇವೆ. ಈ ದೀಪಾವಳಿಯ ಮಹತ್ವ ತುಂಬಾನೇ ವಿಶೇಷ. ಇನ್ನೂ ಮನೆಯ ಸುತ್ತಲೂ ದೀಪವನ್ನು ಹಚ್ಚಿಸಿ ಮನೆ ಮಂದಿಯೆಲ್ಲ ತುಂಬಾ ವಿಜೃಂಭಣೆಯಿಂದ ಆಚರಿಸಿದ್ದೇವೆ ದೀಪಾವಳಿ ಹಬ್ಬದಂದು ಪಟಾಕಿ ಇಲ್ಲ ಅಂದ್ರೆ ಅದಕ್ಕೆ ಕಲೆಯೇ ಬರಲಾರದು ಆದರೆ ನಮ್ಮ ಮನೆಯಲ್ಲಿ ಅಪ್ಪನಿಗೆ ಪಟಾಕಿ ಅಂದರೆ ತುಂಬಾನೇ ಭಯ ಅದಕ್ಕೆ ಪಟಾಕಿಯನ್ನು ಹಚ್ಚುವುದು ಬೇಡ ಎಂದು ಕಳೆದ ವರ್ಷ ಹೇಳಿದ್ರು ಕೂಡ ಅವರ ಮಾತಿನಂತೆಯೇ ಪಟಾಕಿಯನ್ನು ಹಚ್ಚಿಲ್ಲ ಆದರೆ ಈ ವರ್ಷ ಪಟಾಕಿಯನ್ನು ಹಚ್ಚಿಯೇ ಹಚ್ಚುತ್ತೇವೆ ಎಂದು ಅಪ್ಪನ ಬಳಿ ಹೇಳಿ ಆಯಿತು ಎಂದು ಒಪ್ಪಿದ್ದಾರೆ ಈ ವರ್ಷ ತುಂಬಾ ಖುಷಿಯಿಂದ, ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ.
ಈ ವರ್ಷದ ದೀಪಾವಳಿಯೂ ಎಲ್ಲರ ಬಾಳಿನಲ್ಲಿ ಸುಖವನ್ನು ತರಲಿ ಹಾಗೂ ಬದುಕಿನಲ್ಲಿ ಸಂತೋಷವನ್ನು ತರಲಿ... ಎಂಬುದು ನನ್ನ ಆಶಯ ಕಹಿ ನೆನಪುಗಳನ್ನು ಮರೆಮಾಚಿ ಹೊಸ ಬದುಕಿನತ್ತ ಸಾಗೋಣ.
- ರಮ್ಯ ಎಮ್ ಶ್ರೀನಿವಾಸ್
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ