ಬೆಂಗಳೂರು: ನ.1ರಂದು ಹತ್ತು ಕೃತಿಗಳ ಲೋಕಾರ್ಪಣೆ

Upayuktha
0

ಬೆಂಗಳೂರು:  ವೀರಲೋಕ ಪುಸ್ತಕ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಹತ್ತು ಕೃತಿಗಳ ಲೋಕಾರ್ಪಣೆ ಸಮಾರಂಭ ಕರ್ನಾಟಕ ರಾಜ್ಯೋತ್ಸವದ ದಿನ (ನ.1) ನಡೆಯಲಿದೆ.


ಬೆಂಗಳೂರಿನ ಎನ್‌.ಆರ್‌ ಕಾಲೋನಿಯ ಡಾ. ಸಿ ಅಶ್ವತ್ಥ್‌ ಕಲಾಭವನದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅಧ್ಯಕ್ಷತೆ ವಹಿಸಲಿದ್ದು, ವಿಜಯ ಕರ್ನಾಟಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಮತ್ತು ಖ್ಯಾತ ಲೇಖಕರಾದ ಸಂತೋಷ್‌ ಕುಮಾರ್‌ ಮೆಹಂದಳೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೆಸರಾಂತ ಬರಹಗಾರ್ತಿ ಕುಸುಮಾ ಆಯರಹಳ್ಳಿ ಪುಸ್ತಕ ಪರಿಚಯ ಮಾಡಲಿದ್ದಾರೆ.


ಅಂದು ಬಿಡುಗಡೆಯಾಗಲಿರುವ ಹತ್ತು ಪುಸ್ತಕಗಳು ಮತ್ತು ಲೇಖಕರ ವಿವರ ಇಂತಿದೆ:

ಕೃಷಿ ಯಾಕೆ ಖುಷಿ  (ನರೇಂದ್ರ ರೈ ದೇರ್ಲ), ಹೃದಯದ ಮಾತು ಆಲಿಸಿ (ಮಂಜುನಾಥ್‌ ಚಾಂದ್‌, ಮೆಮೊರೀಸ್‌ ಆಫ್‌ ಬಾರ್ಸ (ರಂಗಸ್ವಾಮಿ ಮೂಕನಹಳ್ಳಿ, ಕ್ಷಯ (ವಾಸುದೇವ ಶೆಟ್ಟಿ), ಪ್ರೀತ್‌ಸು (ರಾಜೀವ ನಾರಾಯಣ ನಾಯಕ), ಕಥಾ ಸಾಗರಿ (ನಾಗವೇಣಿ ವೆಂ. ಹೆಗಡೆ), ಹಿಂದಿನ ನಿಲ್ದಾಣ (ಶುಭಶ್ರೀ ಭಟ್ಟ), ದ್ವೈತ (ರಾಘವ್‌), ಅರ್ಧ ಬಿಸಿಲು ಅರ್ಧ ಮಳೆ (ಸದಾಶಿವ ಸೊರಟೂರು).


ಮಂಡ್ಯ ರಮೇಶ್‌ ನಟನ ಕಥೆ, ಮಾದಕ ದೊರೆ, ಬದುಕೇ ಭಗವಂತ, ತ್ಗಾಗಕ್ಕಿಲ್ಲ ನೂಕುನುಗ್ಗಲು- ಈ ಕೃತಿಗಳು ಮರು ಬಿಡುಗಡೆಯಾಗಲಿವೆ.

ವೀರಲೋಕ ಬುಕ್ಸ್‌ನ ವೀರಕಪುತ್ರ ಶ್ರೀನಿವಾಸ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top