ಗಂಗಾವತಿ: ಇಂದು ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅಭಿಮಾನಿ ಬಳಗದಿಂದ ಗಂಗಾವತಿ ನಗರ ಹೊಸಳ್ಳಿರಸ್ತೆಯ ಎಲ್‌ವಿಟಿ ಕಾಲೋನಿಯಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ "ವೃದ್ದಾಶ್ರಮ ಅಡಿಗಲ್ಲು" ಭೂಮಿಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜನಪ್ರಿಯ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರು ಕಾರ್ಯಕ್ರಮ ಉದ್ಗಾಟಿಸಿ ಡಾ. ಪುನೀತ್ ರಾಜಕುಮಾರ ಅವರನ್ನ ಕುರಿತು ಮಾತನಾಡಿದರು. ಪರೋಪಕಾರ ಮಾಡುವ ಮನಸ್ಥಿತಿಯನ್ನ ನಾವೆಲ್ಲರೂ ಬೆಳಸಿಕೊಳ್ಳಬೇಕು, ಅವರ ಆದರ್ಶ ತತ್ವಗಳು ಯುವ ಪಿಳಿಗೆಗೆ ಸಂದೇಶವಾಗಿದೆ ಎಂದು ಮಾತನಾಡಿದರು. ಈ ಸಮಯದಲ್ಲಿ ಶಾಸಕರನ್ನು ಅಭಿಮಾನಿ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಪೌರಾಯುಕ್ತರಾದ ವಿರುಪಾಕ್ಷಪ್ಪ ಮೂರ್ತಿ, ಅಭಿಮಾನಿ ಬಳಗದ ಅಧ್ಯಕ್ಷರಾದ ಸಣ್ಣ ಭೋಜಪ್ಪ, ನಗರಸಭೆ ಸದಸ್ಯರಾದ ನವೀನ ಮಾಲಿಪಾಟೀಲ್, ಹೊಸಳ್ಳಿಗ್ರಾಮದ ಮುಖಂಡರಾದ ಹನುಮಂತಪ್ಪ ನಾಯಕ, ಚೆಂದ್ರಪ್ಪ, ಶಿವನಗೌಡ, ಸಣ್ಣ ಹುಲಗಪ್ಪ, ಮುಖಂಡರಾದ ಸಂಗಪ್ಪ ಚಲುವಾದಿ, ಮಂಜುನಾಥ ಯಡೆಗೌಡರು, ಮಂಜುನಾಥ ಸೋಮಸಾಗರ್, ರಕ್ತ ಭಂಡಾರ ಕೇಂದ್ರ ಕೃಷ್ಣ, ಹಾಗೂ ವಾರ್ಡಿನ ಪ್ರಮುಖರು, ಹಿರಿಯರು ಹಿತೈಷಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ


