ಮಂಗಳೂರು: ಯಕ್ಷಗಾನವು ಇಂದು ಯುವ ಜನತೆಯನ್ನು ಬಹುವಾಗಿ ಆಕರ್ಷಿಸುತ್ತಿದೆ. ಅದರಲ್ಲೂ ಮಕ್ಕಳು, ಮಹಿಳೆಯರು ಕೂಡ ಒಂದು ವಿಶೇಷವಾಗಿ ರಂಗವನ್ನು ಆಳುತ್ತಾ ಬರುತ್ತಿರುವುದು ಸ್ವಾಗತಾರ್ಹ ಎಂದು ಶ್ರೀಮತಿ ರತ್ನಾ ಎಸ್. ಉಡುಪ ಹೇಳಿದರು.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಿರಿ ಚಾವಡಿಯಲ್ಲಿ ನಡೆದ ನವಭಾರತ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯಕ್ಷ ಕಲಾವಿದ, ಯಕ್ಷ ಛಾಯಾಗ್ರಹಣ ಕಲಾವಿದ ಶ್ರೀ ಮಧುಸೂದನ ಅಲೆವೂರಾಯ ವರ್ಕಾಡಿಯವರನ್ನು ಸನ್ಮಾನಿಸುತ್ತಾ ತುಳು ಅಕಾಡೆಮಿಯ ಅಧ್ಯಕ್ಷ ಶ್ರೀ ದಯಾನಂದ ಜಿ. ಕತ್ತಲ್ ಸಾರ್ ರವರು, ಯಕ್ಷಗಾನ ಅಕಾಡೆಮಿಯಾದ ನವ ಭಾರತ ಸಂಸ್ಥೆ ಹಮ್ಮಿಕೊಂಡ ಈ ಕಾರ್ಯಕ್ರಮ ಸ್ತುತೃರ್ಹವಾದುದು. 80 ವರ್ಷಗಳ ಇತಿಹಾಸವುಳ್ಳ ನವ ಭಾರತ ರಾತ್ರಿ ಶಾಲೆಯು ಇಂದು ಅನೇಕ ಶಿಕ್ಷಣಾಲಭ್ಯವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಮಧುಸೂದನ ಅಲೆವೂರಾಯರ ಯಕ್ಷಗಾನೀಯ ಸೇವೆಯನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿ ಅವರನ್ನು ನವ ಭಾರತ ಯಕ್ಷಗಾನ ಅಕಾಡೆಮಿಯೊಂದಿಗೆ ಸೇರಿ ಸನ್ಮಾನಿಸಲು ಹೆಮ್ಮೆ ಪಡುತ್ತಿದೆ. ಅವರಿಂದ ಈ ಅನುಪಮ ಸೇವೆ ಇನ್ನೂ ಚೆನ್ನಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಶ್ರೀ ಶಂಕರ್, ಅಕಾಡೆಮಿಯ ಶ್ರೀಮತಿ ಸಾವಿತ್ರಿ ಸೋಮಶೇಖರ್. ಯಕ್ಷಗುರು ಶ್ರೀ ರವಿ ಅಲೆವೂರಾಯ ಹಾಗೂ ನವ ಭಾರತ ಎಜ್ಯುಕೇಶನ್ ಸೊಸೈಟಿ (ರಿ) ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ಶ್ರೀ ಸತೀಶ್ ಭಟ್, ಮಂಜರಪಲ್ಕೆ, ಶ್ರೀಸುದಾಸ್ ಕಾವೂರು ಹಾಗೂ ಸನ್ಮಾನಿತ ಶ್ರೀ ಮಧುಸೂದನ ಅಲೆವೂರಾಯ ವರ್ಕಾಡಿಯವರ ಹಿಮ್ಮೇಳದೊಂದಿಗೆ ಐಗುಳೆ ಸಿರಿಕೃಸ್ಣೆ ಎಂಬ ಬಯಲಾಟ ನವ ಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯ- ಸದಸ್ಯೆಯರಿಂದ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ