ನಿಮ್ಮೊಂದಿಗೆ: ಉಪಯುಕ್ತ ನ್ಯೂಸ್‌ ಬಳಗಕ್ಕೆ ಮೂರರ ಸಂಭ್ರಮ, ನೂರರ ಹಂಬಲ

Upayuktha
0

ಉಪಯುಕ್ತ ನ್ಯೂಸ್‌ ಡಿಜಿಟಲ್ ಮಾಧ್ಯಮ ಬಳಗ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. 2019ರ ಸೆಪ್ಟೆಂಬರ್‌ 16ರಂದು ಪ್ರಾರಂಭವಾದ ನಮ್ಮ ಬಳಗ ಮೊನ್ನೆಯಷ್ಟೇ ಮೂರನೇ ಜನ್ಮದಿನವನ್ನು ದಾಟಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.  ನಕಾರಾತ್ಮಕ ವಿಚಾರಗಳಿಗೆ ಆದ್ಯತೆ ನೀಡದೆ, ಸಂಪೂರ್ಣ ಸಕಾರಾತ್ಮಕ ವಿಷಯಗಳನ್ನೇ ಓದುಗರಿಗೆ ನೀಡಬೇಕೆಂಬ ಹಂಬಲದೊಂದಿಗೆ ಇದುವರೆಗೂ ಸಾಗಿ ಬಂದಿದೆ. ನಮ್ಮ ಓದುಗರೂ ಸಹ ಈ ಧೋರಣೆಯನ್ನು ಒಪ್ಪಿ ಬೆಂಬಲಿಸಿ ಮುನ್ನಡೆಸಿದ್ದಾರೆ. ಜನಪ್ರಿಯತೆಯ ದೃಷ್ಟಿಯಿಂದ ಉಪಯುಕ್ತ ನ್ಯೂಸ್‌ ಡಿಜಿಟಲ್ ಮಾಧ್ಯಮ ಈ ಮೂರು ವರ್ಷಗಳಲ್ಲಿ ಮಹತ್ವದ ಮೈಲುಗಲ್ಲನ್ನು ದಾಟಿದೆ. ನಮ್ಮ ಬಳಗದ ಉಪಯುಕ್ತ.ಕಾಂ, ಲೋಕಲ್‌.ಉಪಯುಕ್ತ, ಉಪಯುಕ್ತ ಪಾಡ್‌ಕಾಸ್ಟ್‌, ಉಪಯುಕ್ತ ಇಂಗ್ಲಿಷ್‌, ಉಪಯುಕ್ತ ಭಾರತ, ಉಪಯುಕ್ತ- ಇ-ಪೇಪರ್‌, ಉಪಯುಕ್ತ ಡೈರೆಕ್ಟರಿ, ಉಪಯುಕ್ತ ಆಡ್ಸ್‌.... ಹೀಗೆ ಎಲ್ಲ ಮಾಧ್ಯಮಗಳು ಒಟ್ಟಾಗಿ 45 ಲಕ್ಷಕ್ಕೂ ಹೆಚ್ಚು ಓದುಗರನ್ನು ತಲುಪಿರುವುದು ಸಣ್ಣ ವಿಷಯವೇನೂ ಅಲ್ಲ.


ಉಪಯುಕ್ತ ಬಳಗದ ಡಿಜಿಟಲ್ ಮಾಧ್ಯಮಗಳಿಗೆ ಶೇ 90ರಷ್ಟು ಓದುಗರು ಭಾರತದಾದ್ಯಂತ ಇದ್ದು, ಉಳಿದ ಶೇ 10ರಷ್ಟು ಓದುಗರು  ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಅರಬ್‌ ದೇಶಗಳು, ಕೆನಡಾ... ಹೀಗೆ ಹಲವಾರು ಪ್ರಮುಖ ವಿದೇಶಗಳಲ್ಲಿದ್ದಾರೆ. ಈ ಎಲ್ಲ ಓದುಗರು ಅಭಿಮಾನದಿಂದ ಕೈಹಿಡಿದು ಮುನ್ನಡೆಸುತ್ತಿರುವುದಕ್ಕೆ ನಾವು ಆಭಾರಿಗಳಾಗಿದ್ದೇವೆ.


ಮೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಆರಂಭದಿಂದಲೂ ನಮ್ಮನ್ನು ಬೆಂಬಲಿಸುತ್ತಿರುವ ಜಾಹೀರಾತುದಾರರು ಮತ್ತು ಹಿತೈಷಿಗಳನ್ನು ಸ್ಮರಿಸಿಕೊಳ್ಳಲೇಬೇಕು.


ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೈವಿಧ್ಯಮಯ ವಿಷಯಗಳೊಂದಿಗೆ, ಹೆಚ್ಚು ಹೆಚ್ಚು ಓದುಗರನ್ನು ತಲುಪುವ ನಮ್ಮ ಪ್ರಯತ್ನಗಳಿಗೂ ನಿಮ್ಮ ಬೆಂಬಲ, ಶುಭ ಹಾರೈಕೆಗಳಿರಲಿ.


-ಚಂದ್ರಶೇಖರ ಕುಳಮರ್ವ

ಸಂಪಾದಕ

ಉಪಯುಕ್ತ ನ್ಯೂಸ್‌ ಡಿಜಿಟಲ್ ಮಾಧ್ಯಮ ಬಳಗ

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ



web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top