ಗ್ರಾಮಾಭಿವೃದ್ಧಿಯಲ್ಲಿ ಸಮುದಾಯ ಕೇಂದ್ರಿತ ಸಂಸ್ಥೆಗಳ ಪಾತ್ರ ಬಹಳ ಮಹತ್ವ : ಡಾ. ಪ್ರಮೀಳ ಜೆ. ವಾಜ್

Upayuktha
0


ಉಡುಪಿ
: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ನಡೆದ ಸಮಾಜಕಾರ್ಯ ಶಿಬಿರದ ಅಂಗವಾಗಿ ಸಮುದಾಯ ಕೇಂದ್ರಿತ ಸಂಸ್ಥೆಗಳೊಂದಿಗೆ ಶಿಬಿರಾರ್ಥಿಗಳು ಸಂವಾದ ನಡೆಸಿದರು. ಸಹಾಯಕ ಶಿಬಿರಾಧಿಕಾರಿ ಡಾ. ಪ್ರಮೀಳ ಜೆ. ವಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿ “ಯಾವುದೇ ಗ್ರಾಮ ಪಂಚಾಯತ್‍ನೊಂದಿಗೆ ನಾಗರಿಕರು ಹಾಗೂ ಬೇರೆ ಬೇರೆ ಉದ್ದೇಶಗಳಿಗಾಗಿ ಸಮುದಾಯದ ಜನರು ಸ್ಥಾಪಿಸಿದ ಸಂಸ್ಥೆಗಳು ತಮ್ಮದೇ ರೀತಿಯಲ್ಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಆರಂಭಿಸಿದ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಹೇಗೆ ತಮ್ಮ ಪ್ರಭಾವ ಬೀರುತ್ತವೆ ಮತ್ತು ಸಂಘಟನೆಗಳಲ್ಲಿನ ಅನುಭವಗಳನ್ನು ಶಿಬಿರಾರ್ಥಿಗಳು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಸಂವಾದವನ್ನು ಆಯೋಜಿಸಲಾಗಿದೆ” ಎಂದರು.



ಈ ಸಂವಾದ ಕಾರ್ಯಕ್ರಮಲ್ಲಿ ಸ್ಥಳೀಯ ಸ್ವಸಹಾಯ ಸಂಘಗಳ ಸದಸ್ಯರು, ಶ್ರೀ ಗುರುಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಅಜೀಜ್, ಕಲಾ ದೇಗುಲ ಕೆಳನೇಜಾರಿನ ಅಧ್ಯಕ್ಷರಾದ ಶ್ರೀ ಉದಯ ಕುಮಾರ್, ಬಾಲಮಾರುತಿ ವ್ಯಾಯಾಮ ಶಾಲೆ ಕಲ್ಯಾಣಪುರದ ಅಧ್ಯಕ್ಷ ಶ್ರೀ ಗಣೇಶ್ ಶೇರಿಗಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸದ ಸಂಯೋಜಕರಾದ ಶ್ರೀಮತಿ ಶಕುಂತಳ ಹಾಗೂ ಸ್ವಸಹಾಯ ಸಂಘಗಳ ಪದಾಧಿಕಾರಿಗಳಾದ ಶ್ರೀಮತಿ ಮರಿಯ ಡಿಸೋಜ ಇವರು ಶಿಬಿರಸ್ಥಳಕ್ಕೆ ಆಗಮಿಸಿ ತಮ್ಮ ಸಂಸ್ಥೆಗಳ ಇತಿಹಾಸ, ಬೆಳವಣಿಗೆ ಮತ್ತು ಕಲ್ಯಾಣಪುರದ ಗ್ರಾಮಾಭಿವೃದ್ಧಿಗೆ ಈ ಸಂಸ್ಥೆಗಳ ಕೊಡುಗೆಗಳ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. 



ಶಿಬಿರಾಧಿಕಾರಿ ಶ್ರೀಮತಿ ಸುಷ್ಮಾ ಟಿ., ಉಪನ್ಯಾಸಕರಾದ ಶ್ರೀ ರಾಜೇಂದ್ರ ಎಂ, ಶ್ರೀಮತಿ ಶ್ರೀಕಲಾ ಕುಮಾರಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸ್ಪಂದನ ಸ್ವಾಗತಿಸಿ, ಸಜನಿ ವಂದಿಸಿದರು. ದೀಪಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top