ಧರ್ಮಸ್ಥಳದಲ್ಲಿ 51ನೇ ವರ್ಷದ ಪುರಾಣ ವಾಚನ-ಪ್ರವಚನ ಸಂಪನ್ನ

Upayuktha
0


 ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಪುರಾಣ ವಾಚನ-ಪ್ರವಚನದ ಮಂಗಲೋತ್ಸವ ಕ್ಷೇತ್ರದ ಪ್ರವಚನ ಮಂಟಪದಲ್ಲಿ ಸಂಪನ್ನಗೊಂಡಿತು. ಪುರಾಣ ಕಥೆಗಳ ಶ್ರವಣದಿಂದ ಪುಣ್ಯಭಾಜನರಾಗುವ ಕಾರ್ಯ 63 ದಿವಸಗಳು ನಿರಂತರ ನಡೆದಿದೆ. ಕ್ಷೇತ್ರದ ಮಂಜುನಾಥ ಸ್ವಾಮಿಯ ಅನುಗ್ರಹ ವಾಚನ-ಪ್ರವಚನಕಾರರಿಗೆ ಲಭಿಸಲಿ ಎಂದು ಕ್ಷೇತ್ರದ ಪರಮ ಪೂಜ್ಯ ಡಾ, ಡಿ. ವೀರೇಂದ್ರ ಹೆಗ್ಗಡೆಯವರು ಆಶೀರ್ವಚಿಸಿದರು.

ಈ ಸಮಾರಂಭದಲ್ಲಿ ಮಾಣಿಲದ ಶ್ರೀ ಮೋಹನ ದಾಸ ಸ್ವಾಮೀಜಿ, ಡಾ. ಹೇಮಾವತಿ ವಿ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ನೂತನವಾಗಿ ರಾಜ್ಯ ಸಭೆಗೆ ನಿಯುಕ್ತಿಗೊಂಡ ಪೂಜ್ಯ ಹೆಗ್ಗಡೆಯವರನ್ನು ವಾಚನ-ಪ್ರವಚನಕಾರರು ಸನ್ಮಾನಿಸಿ ಗೌರವಿಸಿದರು.

ಈ ಮಂಗಲೋತ್ಸವ ಕಾರ್ಯಕ್ರಮದ ಪುರಾಣ ಪ್ರವಚನವನ್ನು ಉಜಿರೆ ಶ್ರೀ ಅಶೋಕ್ ಭಟ್ ಹಾಗೂ ಕುಮಾರಿ ಸುಪ್ರಿತ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಸರ್ವರನ್ನು ಬೆಳಾಲು ಲಕ್ಷ್ಮಣ ಗೌಡ ಸ್ವಾಗತಿಸಿ ಶ್ರೀ ಎ.ವಿ. ಶೆಟ್ಟಿ ಧನ್ಯವಾದ ಸಮರ್ಪಿಸಿ ಶ್ರೀನಿವಾಸ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಯೋಜಕರಾಗಿ ಸಂತೋಷ್ ಸಹಕರಿಸಿದರು.

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top