ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರಾಂಡ್ ಫಿನಾಲೆ: ಸುಳ್ಯದ ತನ್ಮಯ್‌ಗೆ ದ್ವಿತೀಯ ಬಹುಮಾನ

Chandrashekhara Kulamarva
0

ಉಪ್ಪಿನಂಗಡಿ: ಉಪ್ಪಿನಂಗಡಿಯ ರಾಮನಗರ ಗಾಣಿಗ ಸಮುದಾಯ ಭವನದಲ್ಲಿ ಆರ್ ಪಿ ಕ್ರಿಯೇಷನ್ಸ್ ಪಾಂಬಾರು ಆಯೋಜಿಸಿದ್ದ ಗಾನ ಶಾರದೆ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಯಲ್ಲಿ ಸುಳ್ಯದ ತನ್ಮಯ್ ಎಮ್  ಸೋಮಯಾಜಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾನೆ.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರಿನ ಶಾಸಕರಾದ ಸಂಜೀವ್ ಮಠಂದೂರು ಅವರು ವಹಿಸಿದ್ದರು. ಸುಳ್ಯದ ಖ್ಯಾತ ಸಾಹಿತಿ, ಗಾಯಕ ಮತ್ತು ಜ್ಯೋತಿಷಿ ಅಭಿನಂದನಾ ಭಾಷಣ ಮಾಡಿ ಬಹುಮಾನ ನೀಡಿ ಗೌರವಿಸಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರ್ ಪಿ ಕ್ರಿಯೇಷನ್ ಅಧ್ಯಕ್ಷ ರವಿ ಪಾಂಬಾರ್, ದಿಲೀಪ್ ಸುಳ್ಯ, ಖ್ಯಾತ ಗಾಯಕರಾದ ಮಿಥುನ್ ರಾಜ್ ವಿದ್ಯಾಪುರ, ಚಂದ್ರಶೇಖರ್ ಪುತ್ತೂರು, ಶಿವಾನಂದ್ ಶೆಣೈ, ಹರ್ಷಿತಾ ಸುಳ್ಯ, ಪದ್ಮರಾಜ್ ವಿಟ್ಲ ಇನ್ನಿತರರು ಉಪಸ್ಥಿತರಿದ್ದರು. ತನ್ಮಯ್ ಸಂತ ಜೋಸೆಫ್  ಶಾಲೆಯಲ್ಲಿ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಮುಳ್ಯ ಅಟ್ಲೂರಿನಲ್ಲಿ ವಾಸವಾಗಿರುವ ಶ್ರೀಮತಿ ರಂಜಿನಿ  ಮತ್ತು ವಿಕ್ರಮ್ ಸೋಮಯಾಜಿ ಅವರ ಸುಪುತ್ರನಾಗಿದ್ದಾನೆ.

web counter

إرسال تعليق

0 تعليقات
إرسال تعليق (0)
To Top