ಮಂಗಳೂರು: ಸೆ.18ರಂದು ಬಾಲ ನೃತ್ಯ ಪ್ರತಿಭೋತ್ಸವ-2022

Upayuktha
0


ಮಂಗಳೂರು: ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್‌ ಮಂಗಳೂರು ವತಿಯಿಂದ ಬಾಲ ನೃತ್ಯ ಪ್ರತಿಭೋತ್ಸವ-2022 ಕಾರ್ಯಕ್ರಮ ಕದ್ರಿ ಮಲ್ಲಿಕಟ್ಟೆಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಸೆ.18ರಂದು ಭಾನುವಾರ ಸಂಜೆ 3:30ರಿಂದ ನಡೆಯಲಿದೆ.

ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್ ಯು. ಕೆ. ಪ್ರವೀಣ್‌ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ನಾಟ್ಯ ವಿದುಷಿ ಶ್ರೀಮತಿ ಕಮಲಾ ಭಟ್‌ ಗೌರವ ಉಪಸ್ಥಿತಿ ಇರಲಿದ್ದಾರೆ.


ಬಾಲ ನೃತ್ಯೋತ್ಸವದಲ್ಲಿ ಭಾಗವಹಿಸುವ ಪುಟಾಣಿಗಳು:

ಅದಿತಿ ಲಕ್ಷ್ಮೀ ಭಟ್‌, ಶ್ರೀಕಲಾ, ರಿಧಿ ಶೆಟ್ಟಿ, ಅಭಿಜ್ಞ, ಅಭಿನ್ಯ ಎಚ್‌. ಶರಣ್ಯ ಜಿ.ವಬಿ, ದ್ವಿತಿ ಶೆಟ್ಟಿ, ಶ್ರೇಷ್ಠ ರಾವ್‌, ಪುಲಕ, ದಿಯಾ ಎಸ್‌, ಆಚಾರ್ಯ, ಪ್ರದ್ಯುಮ್ನ ತೇಜಸ್ವಿ, ಶಿವಾನಿ ರಾವ್‌, ಕುಮಾರಿ ಕೃಷ್ಣ ಸುನಿಲ್‌.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top