ಸೆ.10-11: ಸೌಗಂಧಿಕದಲ್ಲಿ ಕಾವ್ಯವಾಚನ ಮತ್ತು ನಾಟಕ

Upayuktha
0


ಪುತ್ತೂರು: ಪರ್ಪುಂಜದ ಸೌಗಂಧಿಕದಲ್ಲಿ ಇದೇ 10 ಮತ್ತು 11ರಂದು ಕಾವ್ಯವಾಚನ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಎರಡೂ ದಿನ ಅಪರಾಹ್ನ 2.30ಕ್ಕೆ ಹಿರಿಯ ರಂಗನಟ ಮತ್ತು ರಂಗನಿರ್ದೇಶಕ ಮೈಸೂರಿನ ಹುಲುಗಪ್ಪ ಕಟ್ಟಿಮನಿ ಅವರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರ ‘ಚಕೋರಿ’ ಮಹಾಕಾವ್ಯದ ವಾಚನ ನಡೆಯಲಿದೆ. 


ಶನಿವಾರ, ಸೆ.10ರ ಸಂಜೆ 6 ಗಂಟೆಗೆ ಮಂಗಳೂರಿನ ಆಯನ ನಾಟಕ ಮನೆ ‘ದ್ವೀಪ’ ನಾಟಕವನ್ನು ಪ್ರದರ್ಶಿಸಲಿದೆ. ಅಥೊಲ್ ಪ್ಯೂಗಾಡ್ ಅವರ ದಿ ಐಲೆಂಡ್ ಕೃತಿಯನ್ನು ಎಸ್.ಆರ್. ರಮೇಶ್ ಮತ್ತು ಕೆ.ಪಿ. ಲಕ್ಷ್ಮಣ್ ಅವರು ಅನುವಾದಿಸಿದ್ದು ಕೆ.ಪಿ. ಲಕ್ಷ್ಮಣ್ ಅವರು ವಿನ್ಯಾಸ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಂದ್ರಹಾಸ ಉಳ್ಳಾಲ್ ಮತ್ತು ಪ್ರಭಾಕರ್ ಕಾಪಿಕಾಡ್ ಇಬ್ಬರೇ ನಟರು ಈ ನಾಟಕದ ಪಾತ್ರಧಾರಿಗಳು. ಸಂಗೀತ: ಶ್ಯಾಮ್ ಸುಂದರ್; ರಂಗಸಜ್ಜಿಕೆ: ಮಧ್ವ, ಮಂಗಳೂರು ಹಾಗೂ ನಿರ್ವಹಣೆ: ಮೋಹನ ಚಂದ್ರ ಮಂಗಳೂರು. ‘ದ್ವೀಪ’ದ ಈ ಪ್ರದರ್ಶನ ಆಯನ ತಂಡದ 26ನೇ ರಂಗಪ್ರಯೋಗವಾಗಿದೆ.

 - ಸೌಗಂಧಿಕ ಬಳಗ

ಪರ್ಪುಂಜ, ಪುತ್ತೂರು

9900409380 / 9448012066


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top