ಕರ್ಣಾಟಕ ಬ್ಯಾಂಕ್: ಠೇವಣಿಗಳ ಬಡ್ಡಿ ದರ ಹೆಚ್ಚಳ

Upayuktha
0

ಮಂಗಳೂರು: ನವರಾತ್ರಿ- ದಸರಾ ಹಬ್ಬದ ಸಂಭ್ರಮವನ್ನು ನಾಡಿನ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇಶದ ಖಾಸಗಿ ವಲಯದ ಮುಂಚೂಣಿಯ ಬ್ಯಾಂಕ್‌ ಎಂದೇ ಹೆಸರಾದ ಕರ್ಣಾಟಕ ಬ್ಯಾಂಕ್‌ ತನ್ನ ಎಲ್ಲ ಗ್ರಾಹಕರಿಗೆ ಹಬ್ಬದ ಕೊಡುಗೆಗಳನ್ನು ನೀಡಲು ಮುಂದಾಗಿದೆ.  ವಿವಿಧ ಪರಿಪಕ್ವತಾ ಅವಧಿಗಳಲ್ಲಿ 10 ಕೋಟಿ ರೂ ಮೊತ್ತದ ವರೆಗಿನ ಅವಧಿ ಠೇವಣಿಯ ಬಡ್ಡಿದರಗಳನ್ನು ಹೆಚ್ಚಳ ಮಾಡಿದೆ. ಈ ಮೂಲಕ ಠೇವಣಿದಾರ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ನೀಡಲು ಮುಂದಾಗಿದೆ.

ಹಬ್ಬದ ಸಂಭ್ರಮದಲ್ಲಿ ಬ್ಯಾಂಕ್‌ ಕೂಡ ಭಾಗಿಯಾಗುತ್ತಿದ್ದು, ತನ್ನ ಎಲ್ಲಾ ಗ್ರಾಹಕರು ಮತ್ತು ತನ್ನ ನಿರೀಕ್ಷಿತ ಗ್ರಾಹಕರನ್ನು ವಿವಿಧ ಮೆಚ್ಯೂರಿಟಿ ಅವಧಿಗಳಲ್ಲಿ 10 ಕೋಟಿ ಮೊತ್ತದವರೆಗಿನ ಅವಧಿಯ ಠೇವಣಿಗಳಿಗೆ ಹೆಚ್ಚಿನ ದರದ ಬಡ್ಡಿ ನೀಡುತ್ತಿರುವುದಾಗಿ ಪ್ರಕಟಿಸಿದೆ.

7 ದಿನಗಳಿಂದ 90 ದಿನಗಳವರೆಗೆ ಹೂಡಿಕೆ ಮಾಡಿದ 2 ಕೋಟಿ ರೂ.ಗಳಿಗಿಂತ ಕಡಿಮೆ ಠೇವಣಿಗಳಿಗೆ, ಬ್ಯಾಂಕ್ ಈಗ 5.25% ನೀಡುತ್ತದೆ. ಅದೇ ಅವಧಿಗೆ, ರೂ.2 ಕೋಟಿಯಿಂದ ರೂ.10 ಕೋಟಿಯ ಠೇವಣಿಗಳ ಮೇಲೆ, ಪರಿಷ್ಕೃತ ದರವು 5.60% ಆಗಿರುತ್ತದೆ.

1 ರಿಂದ 2 ವರ್ಷಗಳ ವರೆಗಿನ ಮೆಚ್ಯೂರಿಟಿ ಅವಧಿಗೆ, ರೂ.2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು 6.40% ಕ್ಕೆ ಹೆಚ್ಚಿಸಲಾಗಿದೆ. ಅದೇ ಅವಧಿಗೆ ರೂ.2 ಕೋಟಿಯಿಂದ ರೂ.10 ಕೋಟಿ ವರೆಗಿನ ಠೇವಣಿಗಳಿಗೆ ಪರಿಷ್ಕೃತ ದರಗಳು 6.50% ಆಗಿರುತ್ತದೆ.

ಈ ಪರಿಷ್ಕೃತ ಬಡ್ಡಿದರಗಳು ಸೆಪ್ಟೆಂಬರ್ 29, 2022 ರಿಂದ ಜಾರಿಗೆ ಬರುತ್ತವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top