ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ಬಸ್ ಸೇವೆಗೆ ಶುಭ ಹಾರೈಸಿದರು.
ಉಜಿರೆ: ಕೆಎಸ್ಸಾರ್ಟಿಸಿ ವತಿಯಿಂದ ಕೊಯಮತ್ತೂರು– ಧರ್ಮಸ್ಥಳ ಮಧ್ಯೆ ಮೋಲ್ವೊ ಬಸ್ ಸೇವೆ ಆರಂಭಗೊಂಡಿದೆ. ನೂತನ ಬಸ್ ಸೇವೆಗೆ ಹೆಗ್ಗಡೆಯವರು ಶುಭ ಹಾರೈಸಿದರು.
ಪ್ರತಿ ದಿನ ಅಪರಾಹ್ನ ಗಂಟೆ 3.30ಕ್ಕೆ ಕೊಯಮತ್ತೂರಿನಿಂದ ಹೊರಡುವ ವೋಲ್ವೊ ಬಸ್ ರಾತ್ರಿ 9 ಗಂಟೆಗೆ ಮೈಸೂರು ತಲುಪುತ್ತದೆ. ಮೈಸೂರಿನಿಂದ ರಾತ್ರಿ ಗಂಟೆ 10.15ಕ್ಕೆ ಹೊರಡುವ ಬಸ್ ಮುಂಜಾನೆ 4 ಗಂಟೆಗೆ ಸುಬ್ರಹ್ಮಣ್ಯ ತಲುಪಿ ಅಲ್ಲಿಂದ ಧರ್ಮಸ್ಥಳಕ್ಕೆ ಮುಂಜಾನೆ 5 ಗಂಟೆಗೆ ತಲುಪುತ್ತದೆ ಎಂದು ಕೆ.ಎಸ್.ಆರ್.ಟಿಸಿ. ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ