ಸಂಧ್ಯಾ ಶಿಕ್ಷಣ ಭಿನ್ನವಲ್ಲ, ಸ್ಪೂರ್ತಿದಾಯಕ: ರಾಜೇಂದ್ರ ಭಟ್

Upayuktha
0

ವಿವಿ ಸಂಧ್ಯಾ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ದಿನಾಚರಣೆ



ಮಂಗಳೂರು: ಸಂಧ್ಯಾ ಕಾಲೇಜಿನ ಶಿಕ್ಷಣವು ಸಮಯದ ಹೊಂದಾಣಿಕೆಯೇ ಹೊರತು ಹಗಲು ಶಿಕ್ಷಣದಿಂದ ಭಿನ್ನವಾಗಿಲ್ಲ, ಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರರಾದ ರಾಜೇಂದ್ರ ಭಟ್ ಕಾರ್ಕಳ ಅಭಿಪ್ರಾಯಪಟ್ಟಿದ್ದಾರೆ. 


ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು ಇಲ್ಲಿನ ಸ್ನಾತಕೋತ್ತರ ವಿಭಾಗಗಳ ವಾರ್ಷಿಕ ದಿನಾಚರಣೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಭಾರ ಲೆಕ್ಕಿಸದೆ ಸಂಧ್ಯಾ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಇರುತ್ತದೆ. ಅವರ ಸುಪ್ತ ಪ್ರತಿಭೆ ಕ್ಲಪ್ತ ಸಮಯದಲ್ಲಿ ವ್ಯಕ್ತವಾಗಲು ಸಂಧ್ಯಾ ಕಾಲೇಜು ಸ್ಪೂರ್ತಿದಾಯಕವಾದುದು ಎಂದರು.


ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಜಿಎಸ್ಟಿ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ, ಎಂಬಿಎ (ಐಬಿ) ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಜಗದೀಶ್ ಬಿ, ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ ಉಪಸ್ಥಿತರಿದ್ದರು. 


ಕಳೆದ ಶೈಕ್ಷಣಿಕ ವರ್ಷದಲ್ಲಿ ವಿ.ವಿ. ಮಟ್ಟದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಸುಭಾಶ್ಚಂದ್ರ ಕಣ್ವತೀರ್ಥ ವಂದಿಸಿ, ಪ್ರಶಾಂತಿ ಶೆಟ್ಟಿ ಇರುವೈಲು ನಿರೂಪಿಸಿದರು.

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top