ಭೂತಾನ್‌ನಿಂದ ಅಡಿಕೆ ಆಮದು: ತಕ್ಷಣವೇ ಆದೇಶ ರದ್ದತಿಗೆ ಅಡಿಕೆ ಬೆಳೆಗಾರರ ಸಂಘ ಒತ್ತಾಯ

Upayuktha
0

ಪುತ್ತೂರು: ಭೂತಾನ್‌ನಿಂದ 17000 ಟನ್‌ ಹಸಿ ಅಡಿಕೆಯನ್ನು ಯಾವುದೇ ನಿರ್ಬಂಧ ಇಲ್ಲದೆಯೇ ಆಮದಿಗೆ ಕೇಂದ್ರ ಸರ್ಕಾರವು ಡಿಜಿಎಫ್‌ಟಿ ಅನುಮತಿ ನೀಡಿರುವುದು ಬೆಳಕಿಗೆ ಬಂದಿದೆ. ದೇಶದ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ತಕ್ಷಣವೇ ಈ ಅನುಮತಿಯನ್ನು ರದ್ದು ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್‌ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಭೂತಾನ್‌ ಮೂಲಕ ಸದ್ಯ ಅಡಿಕೆ ಆಮದು ಕಾರಣದಿಂದ ಇಲ್ಲಿನ ಅಡಿಕೆ ಮಾರುಕಟ್ಟೆಗೆ, ಅಡಿಕೆ ಬೆಳೆಗೆ ಯಾವುದೇ ಪರಿಣಾಮ ಬೀರದು. ಆದರೆ ಭವಿಷ್ಯದಲ್ಲಿ ಅಡಿಕೆ ಧಾರಣೆಯ ಮೇಲೆ, ಅಡಿಕೆ ಬೆಳೆಗಾರರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿ ಹಸಿ ಅಡಿಕೆ ಅಥವಾ ಚಾಲಿ ಅಡಿಕೆ ಅಥವಾ ದ್ವಿತೀಯ ದರ್ಜೆಯ ಅಡಿಕೆ ಎಂಬುದರ ಬದಲಾಗಿ ಅಡಿಕೆ ಆಮದು ಯಾವುದೇ ವಿಧದಿಂದ ಆದರೂ ಬೇರೆ ಬೇರೆ ಕಾರಣಗಳಿಂದ ದೇಶದ ಅಡಿಕೆ ಬೆಳೆಗಾರರಿಗೆ ಹಾನಿ ಇದೆ. ಹೀಗಾಗಿ ಅಡಿಕೆ ಆಮದು ಯಾವುದೇ ಕಾರಣದಿಂದ ನಡೆಯಬಾರದು. ಇದರ ಜೊತೆಗೆ ಅಡಿಕೆ ಆಮದು ಕನಿಷ್ಟ ಧಾರಣೆ 350 ರೂಪಾಯಿ ನಿಗದಿ ಮಾಡಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಒತ್ತಾಯಿಸುತ್ತದೆ ಎಂದು ಅಶೋಕ್‌ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top