ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ- ಪರೀಕ್ಷಾ ತಯಾರಿ ಕಾರ್ಯಾಗಾರ

Upayuktha
1 minute read
0

ಕಲ್ಯಾಣಪುರ: ಮಿಲಾಗ್ರೆಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ತಯಾರಿ ಕಾರ್ಯಾಗಾರ ಆಗಸ್ಟ್ 27 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಶಾಂತಿ ಪ್ರಮೀಳಾ ಅಧ್ಯಕ್ಷತೆ ವಹಿಸಿದ್ದರು.


ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಮಾಜಕಾರ್ಯ ಉಪನ್ಯಾಸಕ ಗಣೇಶ್ ಪ್ರಸಾದ್ ಜಿ. ನಾಯಕ್, ಹೆತ್ತವರು ಆರಂಭದಿಂದ ಮಕ್ಕಳ ಜೊತೆಗೆ ಅವರ ಶೈಕ್ಷಣಿಕ ವಿಚಾರದಲ್ಲಿ ಸಹಭಾಗಿತ್ವ ವಹಿಸಿದರೆ ಮಕ್ಕಳ ಸರ್ವತೋಮುಖ ಪ್ರಗತಿ ಸಾಧ್ಯ. ಪೂರ್ಣಪ್ರಮಾಣದಲ್ಲಿ ಮುಂಚಿತವಾಗಿ ತಯಾರಿ ನಡೆಸಿದರೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬಹುದು. ಪ್ರತಿಯೊಬ್ಬರೂ ಸ್ವಾಟ್ ಎನಾಲಿಸಿಸ್ ಮಾಡಿದರೆ ಬಲಿಷ್ಠ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದರು.


ಇತರರೊಂದಿಗೆ ಹೋಲಿಕೆ ಮಾಡದೇ, ನಮ್ಮಲ್ಲಿರುವ ಅದಮ್ಯ ಶಕ್ತಿಯ ಬಗ್ಗೆ ವಿಶ್ವಾಸವನ್ನಿಟ್ಟುಕೊಂಡು ಸಮಯ ಹಾಗೂ ಅವಕಾಶಗಳ ಸದ್ಬಳಕೆ ಮಾಡಿದರೆ ಯಶಸ್ಸಿನ ಹಾದಿಯಲ್ಲಿ ಅಡೆತಡೆಗಳು ಎದುರಾಗುವುದಿಲ್ಲ. ನಿರಂತರ ಅಧ್ಯಯನ, ವಿಷಯದಲ್ಲಿ ಆಸಕ್ತಿ, ಕಲಿಕೆಯಲ್ಲಿ ನಿಷ್ಠೆ ಹಾಗೂ ಸ್ಪಷ್ಟ ಗುರಿಗಳನ್ನು ಇಟ್ಟುಕೊಂಡರೆ ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯ ಎಂದು ಹೇಳಿದರು.


ಹಿರಿಯ ಶಿಕ್ಷಕ ನೆಲ್ಸನ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಪ್ರಶಾಂತ್ ಲೋಪೆಲ್, ಬೋಧಕ ಬೋಧಕೇತರರು, ಪೋಷಕರು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top