ಪ್ರೊ. ಪಿ ಎಸ್ ಯಡಪಡಿತ್ತಾಯ ಅವರಿಗೆ 2022 ರ ಅತ್ಯುತ್ತಮ ವಿಸಿ ಗೌರವ

Upayuktha
0

ಮಂಗಳೂರು: ಯೂನಿವರ್ಸಲ್ ಮೆಂಟರ್ ಅಸೋಸಿಯೇಷನ್ ಮತ್ತು ಬ್ರೈನ್ ವಂಡರ್ಸ್ ಸಹಯೋಗದಲ್ಲಿ ಆಗಸ್ಟ್ 27, 2022 ರಂದು ನವದೆಹಲಿಯಲ್ಲಿ ನಡೆದ ಎರಡನೇ ಉನ್ನತ ಶಿಕ್ಷಣದ ಆವಿಷ್ಕಾರ ಮತ್ತು ತಂತ್ರಜ್ಞಾನ ಶೃಂಗಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ದೇಶದ ಟಾಪ್ 50 ಉಪಕುಲಪತಿಗಳ ಪೈಕಿ ಪ್ರತಿಷ್ಠಿತ '2022 ರ ವರ್ಷದ ಉಪಕುಲಪತಿ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


ಅವರು ತಮ್ಮ ವಿವಿಧ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಮತ್ತು ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ತೆಗೆದುಕೊಂಡ ಉಪಕ್ರಮಗಳಿಗಾಗಿ ಈ ಗೌರವ ಸಂದಿದೆ.


ಈ ಕುರಿತು ಸಂತಸ ವ್ಯಕ್ತಪಡಿಸಿದಿರುವ ಕುಲಪತಿಗಳು, ಈ ರಾಷ್ಟ್ರಪ್ರಶಸ್ತಿಯ ಶ್ರೇಯ ವಿಶ್ವವಿದ್ಯಾನಿಲಯ ಸಿಂಡಿಕೇಟ್, ಶೈಕ್ಷಣಿಕ ಪರಿಷತ್ತು, ಡೀನ್ಗಳು, ವಿವಿದ ಪೀಠಾಧಿಪತಿಗಳು, ಎಲ್ಲಾ ಆರು ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜನತೆಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top