ಎಲ್ಲಿದೆ ನಿಜವಾದ ಪ್ರೀತಿ -ಪ್ರೇಮ?

Upayuktha
0


ಈ ಜಗತ್ತಿನಲ್ಲಿ ನಮಗೆ ಹಲವಾರು ರೀತಿಯ ಪ್ರೀತಿ ಕಾಣಲು ಸಿಗುತ್ತವೆ ಆದರೆ ಯಾವ ಪ್ರೀತಿ, ವಿಶ್ವಾಸ ನಂಬಿಕೆ ಅದರದೇ ಆದ ಮೌಲ್ಯವನ್ನು ಹೊಂದಿರುತ್ತದೆ ಎಂದು ನಮಗೆ ತಿಳಿದಿರುವುದಿಲ್ಲ. ನಿಸ್ವಾರ್ಥ ಪ್ರೀತಿಗೆ ಈ ಜಗತ್ತಿನಲ್ಲಿ ಎಂದೂ ಕೊನೆಯಿಲ್ಲ.

ಈ ವಯಸ್ಸೇ ಹಾಗೆ ಹಲವಾರು ಕನಸು ಆಕಾಂಕ್ಷೆಗಳನ್ನು ನಮ್ಮ ಮನಸ್ಸಿನಲ್ಲಿ ಮನೆಮಾಡಿರುತ್ತದೆ. ಕಟ್ಟಿಕೊಂಡ ಕನಸು ಆಕಾಂಕ್ಷೆಗಳೆಲ್ಲ ನನಸು ಮಾಡಬೇಕಾದರೆ ಅದರ ಹಿಂದೆ ಅದೆಷ್ಟೊ ಕಷ್ಟಗಳನ್ನು ಮೆಟ್ಟಿ ಮುಂದೆ ಬರಬೇಕಾಗುತ್ತದೆ. ಈ ಕನಸು ನನಸಾಗುವ ಸಂದರ್ಭದಲ್ಲಿ ತಿಳಿಯದೆ ಪ್ರೀತಿ- ಪ್ರೇಮವೆಂಬ ಭಾವನೆಗಳು ನಮ್ಮಲ್ಲಿ ಉಂಟಾಗುತ್ತದೆ. ಈ ವಯಸ್ಸಿನಲ್ಲಿ ಇಂತಹದೊಂದು ಭಾವನೆ ಬೆಳೆಯುವುದು ಸಹಜ ಆದರೆ ಇದಕ್ಕೆಲ್ಲ ಒಂದು ಕಡಿವಾಣ ಹಾಕಬೇಕು. ಯಾಕಂದ್ರೆ ನಾವು ಕಷ್ಟಪಟ್ಟು ಕನಸು ನನಸಾಗಿಸುವ ಹಂತದಲ್ಲಿರುತ್ತೇವೆ, ನಮ್ಮ ಕನಸು ಈಡೇರಬೇಕಾದರೆ ಇದರ ಹಿಂದೆ ಇರುವ ಕೈಗಳನ್ನು ಒಮ್ಮೆ ನೋಡಬೇಕು. ಬೆವರುಹರಿಸಿ ಸಂಪಾದಿಸಿರುವ ಹಣ, ಇವರ ಬೆವರು ನೀರಿಂದಲೇ ಅನ್ನ ಬೇಯುವುದು ಎಂದು ತಿಳಿದು ತಂದೆ-ತಾಯಿಯರ ಪರಿಸ್ಥಿತಿ ಅವರ ಮುಗ್ಧ ನೋಟವನ್ನು ಒಮ್ಮೆ ನೆನೆಯಬೇಕು.

ನಿಜವಾದ ಪ್ರೀತಿ ಎಂದರೆ ಅದು ಕೇವಲ ತಂದೆ-ತಾಯಿಯ ಪ್ರೀತಿ ಮಾತ್ರ, ಒಂಬತ್ತು ತಿಂಗಳು ಹೊತ್ತ ತಾಯಿ ಜನ್ಮಕ್ಕೆ ಕಾರಣಕರ್ತನಾದ ತಂದೆ ಇವರಿಬ್ಬರೂ ನೀಡುವ ಪ್ರೀತಿಯೇ ಈ ಇಡೀ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವಂತದ್ದು.

ಪ್ರಪಂಚದ ಸೃಷ್ಟಿಕರ್ತನಾದ ದೇವರು ಎಲ್ಲ ಕಡೆ ಚಲಿಸಲಾಗುವುದಿಲ್ಲವೆಂದು ತನ್ನ ಪ್ರತಿರೂಪವಾಗಿ ಜಗತ್ತಿಗೆ ತಂದೆತಾಯಿಯನ್ನು ಸೃಷ್ಟಿಸಿದ್ದಾನೆ.

ಇಂತಹ ತಂದೆ-ತಾಯಿಯನ್ನು ಸದಾಕಾಲ ಪ್ರೀತಿ ಗೌರವದಿಂದ ನೋಡಿಕೊಳ್ಳುವುದು ಮಕ್ಕಳಾದ ನಮ್ಮೆಲ್ಲರ ಜವಾಬ್ದಾರಿ.


-ದೀಕ್ಷಿತ ಗಿರೀಶ್ 

ಪತ್ರಿಕೋದ್ಯಮ ವಿದ್ಯಾರ್ಥಿನಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top