ಉಜಿರೆ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೀಡಿಯೋ ಸಂಕಲನ ತರಬೇತಿ

Upayuktha
0

ಉಜಿರೆ: ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ  ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ವೀಡಿಯೋ ಸಂಕಲನ ಕುರಿತಾದ ಎರಡು ದಿನಗಳ ಕಾರ‍್ಯಗಾರವನ್ನು  ಕಾಲೇಜಿನ ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯಾದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಈ ಸಂದರ್ಭದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಮಾತನಾಡಿದರು. ವಿದ್ಯಾರ್ಥಿಗಳು ಕಲಿಕೆಯ ಹಂತದಿಂದಲೇ ಪ್ರಾಯೋಗಿಕ ಜ್ಞಾನವನ್ನು ಹೊಂದುವ ಅಗತ್ಯವಿದೆ. ಮಾಧ್ಯಮ ಕ್ಷೇತ್ರಗಳ ಬೆಳವಣಿಗೆಯಿಂದಾಗಿ ಹೊಸ ಹೊಸ ಉದ್ಯೋಗವಕಾಶಗಳು ಸೃಷ್ಠಿಯಾಗುತ್ತಿದೆ ಎಂದರು.


ಒಂದು ಕಾಲದಲ್ಲಿ ಪತ್ರಕರ್ತನಿಗೆ ಪತ್ರಿಕೋದ್ಯಮದ ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಕೆಲಸ ಮಾಡುವ ಅವಕಾಶ ಇರುತಿತ್ತು. ಆದರೆ ಇಂದು ಪತ್ರಿಕೋದ್ಯಮದ ಆಯಾಮ ಬದಲಾಗಿದೆ. ಇಂದು ಪತ್ರಕರ್ತನಾದವನು ಎಲ್ಲಾ ಕ್ಷೇತ್ರದಲ್ಲಿ ಪರಿಣಿತನಾಗಿರುವುದು ಅವಶ್ಯವಾಗಿದೆ. ಹೀಗಾಗಿ ಇಂದಿನ ಯುವ ಪೀಳಿಗೆಯ ಪತ್ರಕರ್ತರು ಉತ್ತಮ  ಜ್ಞಾನದೊಂದಿಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರಬೇಕು ಎಂದು ಅಭಿಪ್ರಾಯಪಟ್ಟರು.


ಎರಡು ದಿನಗಳ ಕಾಲ ನಡೆದ ವೀಡಿಯೋ ಸಂಕಲನದ ತರಬೇತಿಯನ್ನು ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋದ ಪ್ರೊಡಕ್ಷನ್ ಅಸಿಸ್ಟೆಂಟ್ ಎ.ಆರ್. ರಕ್ಷಿತ್ ರೈ ನಡೆಸಿಕೊಟ್ಟರು. ಮೊದಲ ದಿನದ ತರಬೇತಿಯಲ್ಲಿ ವಿಡಿಯೋ ಸಂಕಲನಕ್ಕೆ ಬೇಕಾದ ಪ್ರಾಥಮಿಕ ಅಂಶಗಳ ಕುರಿತು ಮಾಹಿತಿಯನ್ನು ನೀಡಲಾಯಿತು. ಎರಡನೇ ದಿನದ ತರಬೇತಿಯಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಎಸ್.ಡಿ.ಎಂ ಮೀಡಿಯಾ ಸ್ಟುಡಿಯೋ ಯುಟ್ಯೂಬ್ ಪೇಜ್‌ನಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ನಮ್ಮೂರ ವಾರ್ತೆಯ ಪ್ಯಾಕೇಜ್‌ಗಳನ್ನು ಸಂಕಲನ ಮಾಡುವ ವಿವಿಧ ಹಂತದ ಕುರಿತು ಮಾಹಿತಿ ನೀಡಲಾಯಿತು. 


ಈ ಸಂದರ್ಭದಲ್ಲಿ  ಸ್ಥಳದಲ್ಲಿಯೇ ಕೆಲವೊಂದು ಎಡಿಟಿಂಗ್ ಟಾಸ್ಕ್‌ಗಳನ್ನು ನೀಡಿ ವಿದ್ಯಾರ್ಥಿಗಳಿಂದಲೇ ವೀಡಿಯೋ ಸಂಕಲನ ಮಾಡಿಸಲಾಯಿತು. ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆದ ವಿಡಿಯೋ ಸಂಕಲನ  ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಸಹಕಾರಿಯಾಯಿತು.

ವರದಿ: ಶಶಿಧರ ನಾಯ್ಕ ಎ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top