
ಉಜಿರೆ: ಎಸ್.ಡಿ.ಎಂ ಮಲ್ಟಿಮೀಡಿಯಾ ಸ್ಟುಡಿಯೋ ಫಿಲಮ್ಸ್ ಬ್ಯಾನರ್‌ನಡಿಯಲ್ಲಿ ಮೂಡಿಬಂದಿರುವ ಎರಡು ಕಿರುಚಿತ್ರಗಳ ಪ್ರೀಮಿಯರ್ ಪ್ರದರ್ಶನವನ್ನು ಕಾಲೇಜಿನ ಸಮ್ಯಕ್ ದರ್ಶನ ಹಾಲ್‍ನಲ್ಲಿ ಆಗಸ್ಟ್ 30 ಮತ್ತು ಸೆಪ್ಟಂಬರ್ 2 ರಂದು ಏರ್ಪಡಿಸಲಾಗಿದೆ.
ಆಗಸ್ಟ್ 30 ರಂದು ತೆರೆ ಕಾಣುತ್ತಿರುವ ಒಬ್ಬ ಹುಡುಗ ಮತ್ತು ಹುಡುಗಿಯ ನಡುವಿನ ಸ್ನೇಹ, ಸಂಬಂಧ ಕುರಿತು ಮೂಡಿ ಬಂದಿರುವ ಮ್ಯೂಸಿಕಲ್ ಕಿರುಚಿತ್ರಕ್ಕೆ ರಾಮ ಮೋಹನ್ ಭಟ್ ಹೆಚ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನವಿದೆ. ಸ್ನಾತಕೊತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎನ್. ಕೆ. ಪದ್ಮನಾಭ ಅವರ ಸಾಹಿತ್ಯ ಮತ್ತು ಸಂಗೀತವಿದ್ದು, ಆ್ಯಂಟನಿ ಅವರ ರಾಗ ಸಂಯೋಜನೆ ಮತ್ತು ಸಾಯಿರೂಪ ದಾಲಿಂಬ ಅವರ ಮಧುರವಾದ ಹಿನ್ನೆಲೆ ಧ್ವನಿಯಿದೆ. ದೀಕ್ಷಿತ್ ಧರ್ಮಸ್ಥಳ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಈ ಕಿರುಚಿತ್ರಕ್ಕೆ ಎ.ಆರ್. ರಕ್ಷಿತ್ ರೈ ಅವರ ಸುಂದರ ಸಂಕಲನವಿದೆ.
ಇನ್ನು ಈ ಕಿರುಚಿತ್ರದಲ್ಲಿ ನಾಯಕ ನಟನಾಗಿ ಹರಿನಾಥ್ ಅಭಿನಯಿಸಿದ್ದು, ನಾಯಕ ನಟಿಯಾಗಿ ದೀಪ್ತಿ ಆನಂದ್ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಎಕ್ಸಿಕ್ಯೂಟಿವ್ ಪ್ರೊಡ್ಯೂಸರಾಗಿ ಹರ್ಷಿತಾ ಹೆಬ್ಬಾರ್, ನಿರ್ದೇಶನ ತಂಡದಲ್ಲಿ ಸುತನ್ ಕೇವಳ ಮತ್ತು ಅರ್ಪಿತ್, ಕ್ರಿಯೇಟಿವ್ ತಂಡದಲ್ಲಿ ರಾಮ್ ಕಿಶನ್ ಮತ್ತು ಸಂಪತ್ ಕುಮಾರ್ ರೈ ಸಹಕಾರಿಯಾಗಿದ್ದಾರೆ. ಈ ಕಿರು ಚಿತ್ರವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಸಹಕಾರದಲ್ಲಿ ಮತ್ತು ವಿವಿಧ ಕ್ರೌಡ್ ಫಂಡಿಂಗ್‍ಗಳ ಮೂಲಕ ನಿರ್ಮಾಣವಾಗಿದೆ ಎಂಬುವುದು ವಿಶೇಷ.
ಸೆಪ್ಟೆಂಬರ್ 2 ರಂದು ಪ್ರದರ್ಶನ ಕಾಣಲಿರುವ ತಂದೆ ಮಗನ ಬಾಂಧವ್ಯ ಮತ್ತು ಅನ್ಯೋನತೆಯನ್ನು ತೋರ್ಪಡಿಸುವ ಜೊತೆಗೆ ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳ ಬಿಂಬಿಸುವ ಹವ್ಯಕ ಭಾಷೆಯಲ್ಲಿ ಬಾಲಾಯ ಸದಾಶಿವ ರೈ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಕಿರುಚಿತ್ರಕ್ಕೆ ಸಂಪತ್ ಕುಮಾರ್ ರೈ ಅವರ ಕಥೆ, ಚಿತ್ರ-ಕಥೆ, ಸಂಭಾಷಣೆ, ನಿರ್ದೇಶನವಿದೆ. ಈ ಕಿರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಶಿಧರ್ ಕೆ ((ಶಂಭು) ಧರ್ಮಸ್ಥಳ ಕಾಣಿಸಿಕೊಂಡಿದ್ದಾರೆ. ಇನ್ನು ನಾಯಕ ನಟನಾಗಿ ಪ್ರಸೀದ್ ಭಟ್ ನಟಿಸಿದ್ದು, ಭಾರತಿ ಹೆಗ್ಡೆ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.
ಈ ಕಿರುಚಿತ್ರವು ದೀಕ್ಷಿತ್ ಧರ್ಮಸ್ಥಳ ಇವರ ಛಾಯಾಗ್ರಹಣದಲ್ಲಿ ಮೂಡಿಬಂದಿದ್ದು, ರಕ್ಷಿತ್ ರೈ ಅವರ ಸಂಕಲನವಿದೆ. ತಾರಾಂಗಣದಲ್ಲಿ ಹರ್ಷಿತಾ ಹೆಬ್ಬಾರ್, ಹರಿನಾಥ್, ಐಶ್ವರ್ಯ ಕೋಣನ, ರಂಜಿತ್ ಕುಮಾರ್, ಸುತನ್ ಕೇವಳ, ಕಾರ್ತಿಕ್ ಹೆಗ್ಡೆ, ತುಕರಾಮ್ ಸಾಲ್ಯಾನ್, ಚೈತ್ರ ಮೊದಲಾದವರು ನಟಿಸಿದ್ದಾರೆ. ಈ ಕಿರು ಚಿತ್ರದ ಹವ್ಯಕ ಭಾಷಾ ಅನುವಾದಕರಾಗಿ ಶಂತನು ಪದ್ಮುಂಜ ಮತ್ತು ರಾಮ್ ಮೋಹನ್ ಭಟ್, ಕ್ರಿಯೇಟಿವ್ ತಂಡದಲ್ಲಿ ಸುತನ್ ಕೇವಳ, ರಾಮ್ ಮೋಹನ್, ಕೀರ್ತನ್ ರಾವ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರಾಗಿ ರಾಮ್ ಕಿಶನ್ ಸಹಕಾರಿಯಾಗಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ