ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಉಪನಿರ್ದೇಶಕರ ಕಛೇರಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ 17 ವಯೋಮಿತಿಯ ಬಾಲಕರ ವಿಭಾಗದಲ್ಲಿ ಸುದಾನ ವಸತಿಯುತ ಶಾಲಾ ವಿದ್ಯಾರ್ಥಿ ಹಾರ್ದಿಕ್ ಎಸ್ ನಾಯ್ಕ್ 10ನೇ ಮತ್ತು 14 ವಯೋಮಿತಿಯಲ್ಲಿ ಅತೀಫ್ ಶೇಕ್ 8ನೇ ಇವರು ದಕ್ಷಿಣ ಕನ್ನಡದ ಜಿಲ್ಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.
ಇವರು ಸುದಾನ ಕ್ರಿಕೆಟ್ ಅಕಾಡೆಮಿಯಲ್ಲಿ ಕಿರಣ್ ಕುಮಾರ್ ಹಾಗೂ ನವೀನ್ ಇವರಿಂದ ತರಬೇತಿ ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್‌ರವರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪರಾಜ್, ಲೀಲಾವತಿ, ಜೀವಿತಾ ಎನ್ ಕೆ ರವರು ಅಭಿನಂದಿಸಿದರು.