ತೆಂಕನಿಡಿಯೂರು ಕಾಲೇಜು : ರಾಷ್ಟ್ರಧ್ವಜ ಸಂಹಿತೆ ಮಾಹಿತಿ ಕಾರ್ಯಕ್ರಮ

Chandrashekhara Kulamarva
0

ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿ ದಿನಾಂಕ : 04 /08 /2022 ರಂದು ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರಧ್ವಜ ಸಂಹಿತೆ ಅರಿವು ಕಾರ್ಯಕ್ರಮ ನಡೆಯಿತು ಭಾರತ ರಾಷ್ಟ್ರಧ್ವಜದ ಕುರಿತಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಉಡುಪಿ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀ ಆನಂದ ಅಡಿಗ ಮಾಹಿತಿ ನೀಡಿದರು.


ಅವರು ಮಾತನಾಡಿ ರಾಷ್ಟ್ರಧ್ವಜ ದೇಶದ ಗೌರವದ ಪ್ರತೀಕವಾಗಿದ್ದು, ಅದರ ಆರೋಹಣ ಅವರೋಹಣ ಹಾಗೂ ರಕ್ಷಣೆಯ ಬಗ್ಗೆ ಸಂಪೂರ್ಣ ಅರಿವನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬನ ನಾಗರಿಕನ ಜವಾಬ್ದಾರಿ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜು ಮಟ್ಟದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಸಂಚಾಲಕ ಶ್ರೀ ರಾಧಾಕೃಷ್ಣ, ವಾಣಿಜ್ಯಶಾಸ್ತ್ರ ವಿಭಾಗದ ಡಾ. ಉದಯ ಶೆಟ್ಟಿ ಕೆ., ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾವ್ಯ ಎಂ. ಸ್ವಾಗತಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top