ಮಂಗಳೂರು: ಮಂಗಳೂರು ವಿ.ವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಹಾಗೂ ಕೆನರಾ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ 'ವಚನಸಾರ ಪ್ರಸರಣೋಪನ್ಯಾಸ ಮಾಲಿಕೆ 'ಈ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಮರು ಓದು ಕಾರ್ಯಕ್ರಮ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಡಾ. ಮಂಜುನಾಥ ಎಂ.ಎಂ. ಪ್ರಾಧ್ಯಾಪಕರು ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ಇವರು ಸಂಪನ್ಮೂಲ ವ್ಯಕ್ತಿಯಾಗಿದ್ದು 'ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಲೋಕನೀತಿ' ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
"ಶತಶತಮಾನಗಳಿಂದ ನಿರಂತರವಾದ ಶೋಷಣೆ ನಡೆಯುತ್ತಿದೆ. ಅಸಮತೋಲನವನ್ನು ನಿವಾರಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಿಸಬೇಕು. ಮನುಷ್ಯ ಸ್ವಾರ್ಥಿಯಾದಾಗ ಸಮಾಜದ ಏಳಿಗೆಯಾಗುವುದಿಲ್ಲ. ವಚನಕಾರರ ವೈಚಾರಿಕ ಚಿಂತನೆಯ ನುಡಿಗಳಲ್ಲಿ ಲೋಕನೀತಿಯಿದೆ" ಎಂದು ನುಡಿದರು. ಕೆನರಾ ಕಾಲೇಜು ಪ್ರಾಂಶುಪಾಲೆ ಡಾ ಪ್ರೇಮಲತಾ. ವಿ ಅಧ್ಯಕ್ಷತೆ ವಹಿಸಿದ್ದರು.
ಅಂಬಿಗರ ಚೌಡಯ್ಯ ಪೀಠದ ಸಂಯೋಜಕ ಪ್ರೊ ಸೋಮಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು.ಎಸ್ ಸ್ವಾಗತಿಸಿ, ಶೈಲಜಾ ಪುದುಕೋಳಿ ವಂದಿಸಿದರು. ಕು.ಶ್ರೀಮಾ ನಿರೂಪಿಸಿದರು. ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ