ನಿಟ್ಟೆ ಕ್ಯಾಂಪಸ್ ನಲ್ಲಿ ಶ್ರೀ ಕೃ‍ಷ್ಣಜನ್ಮಾ‍ಷ್ಟಮಿ ಆ‍ಚರಣೆ

Upayuktha
0

ನಿಟ್ಟೆ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದ ವತಿಯಿಂದ ನಿಟ್ಟೆ ಕ್ಯಾಂಪಸ್ ನಲ್ಲಿ ಆಗಸ್ಟ್ ೧೯ ರಂದು ಸದಾನಂದ ಸಭಾಂಗಣದಲ್ಲಿ ಶ್ರೀ ಕೃ‍ಷ್ಣಜನ್ಮಾ‍ಷ್ಟಮಿ ಹಬ್ಬವನ್ನು ವಿಜ್ರಂಭಣೆ ಹಾಗೂ ವಿಭಿನ್ನವಾಗಿ ಆ‍ಚರಿಸಲಾಯಿತು.


ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್, ಕ್ಯಾಂಪಸ್ ಮೈಂಟೆನೆನ್ಸ್ & ಡೆವಲಪ್ಮೆಂಟ್ ನ ನಿರ್ದೇಶಕ ಪ್ರೊ.ಯೋಗೀಶ್ ಹೆಗ್ಡೆ, ನಿಟ್ಟೆ ವಿದ್ಯಾಸಂಸ್ಥೆಯ ಹಿತೈಶಿ ಶ್ರೀ ಅಶೋಕ್ ಅಡ್ಯಂತಾಯ, ವಿದ್ಯಾರ್ಥಿ ನಿಲಯಗಳ ಚೀಫ್ ವಾರ್ಡನ್ ಗಳಾದ ಡಾ.ವೀಣಾದೇವಿ ಶಾಸ್ತ್ರೀಮಠ್, ಡಾ.ವಿಶ್ವನಾಥ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ೧೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ಕೃಷ್ಣನ ಜನನ, ಕಂಸವಧೆ ಮುಂತಾದ ಅಂಶಗಳನ್ನೊಳಗೊಂಡ ಜೀವನ ಚರಿತ್ರಾ ಕಥಾನಕವನ್ನು ಆಡಿತೋರಿಸಿದ್ರು. ಬಾಲಕಿಯರ ವಿದ್ಯಾರ್ಥಿ ನಿಲಯದ ಚೀಫ್ ವಾರ್ಡನ್ ಡಾ.ವೀಣಾದೇವಿ ಶಾಸ್ತ್ರೀಮಠ್ ಹಾಗೂ ಬಾಲಕರ ವಿದ್ಯಾರ್ಥಿ ನಿಲಯದ ಚೀಫ್ ವಾರ್ಡನ್ ಡಾ.ವಿಶ್ವನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Advt Slider:
To Top