ಮಂಗಳೂರು: ನಗರದ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಈ ಸ್ಪರ್ಧೆ ಜರುಗಲಿದೆ.
ಶ್ರೀ ಕೃಷ್ಣ ವೇಷ ಸ್ಪರ್ಧೆ:
ಶ್ರೀ ಕೃಷ್ಣ ವೇಷ ಸ್ಪರ್ಧೆಯು ಎರಡು ವಿಭಾಗದವರಿಗಾಗಿರುತ್ತದೆ. 2ರಿಂದ 6 ವರ್ಷಗಳ ತನಕ ಮತ್ತು 7ರಿಂದ 10 ವರ್ಷಗಳ ವಯೋಮಾನದವರಿಗಾಗಿ ಪ್ರತ್ಯೇಕ ಸ್ಪರ್ಧೆ ಇರುತ್ತದೆ.
ಚಿತ್ರಕಲಾ ಸ್ಪರ್ಧೆ:
5, 6 ಮತ್ತು 7 ನೆಯ ತರಗತಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ 8, 9 ಮತ್ತು 10ನೆಯ ತರಗತಿಯಲ್ಲಿ ಕಲಿಯುತ್ತಿರುವ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಒಟ್ಟು ಎರಡು ವಿಭಾಗ ಇರುತ್ತದೆ.
ಚಿತ್ರಕಲಾ ಸ್ಪರ್ಧೆಗೆ ಡ್ರಾಯಿಂಗ್ ಹಾಳೆಗಳನ್ನು ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ. ಉಳಿದ ಅಗತ್ಯ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕಾಗುತ್ತದೆ.
ಸ್ಪರ್ಧೆಯ ದಿನಾಂಕ: ಗುರುವಾರ, 18 ಆಗಸ್ಟ್ 2022, ಸಮಯ ಬೆಳಗ್ಗೆ 8 ರಿಂದ 10 ರ ತನಕ.
ಸ್ಥಳ: ಅಮೃತ ವಿದ್ಯಾಲಯ, ಸುಲ್ತಾನ್ ಬತ್ತೇರಿ ರಸ್ತೆ, ಬೋಳೂರು, ಮಂಗಳೂರು.
ಆಸಕ್ತರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 8951470744.
ಮಂಗಳೂರು ನಗರದ ಸುತ್ತಮುತ್ತಲಿನl ಶಾಲೆಗಳ ವಿದ್ಯಾರ್ಥಿಗಳು ದಿನಾಂಕ 17 ರ ಸಂಜೆ 5 ಗಂಟೆಯೊಳಗೆ ನೋಂದಾವಣೆ ಮಾಡಿಸಿಕೊಳ್ಳಬೇಕು ಮತ್ತು ಸ್ಪರ್ಧೆಗೆ ಬರುವಾಗ ಶಾಲೆಯ ಗುರುತಿನ ಚೀಟಿ ತರಬೇಕು ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ