ಬೆಂಗಳೂರು: ದೇಶದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ಕ್ಷೇತ್ರದಲ್ಲಿ 75 ಕಿ.ಮೀ. ಜಾಥಾ ಹಮ್ಮಿಕೊಳ್ಳಲಾಗಿದೆ. ಅಂತೆಯೇ ವರ್ತೂರು ವಾರ್ಡ್ ನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡರ, ಬಿಬಿಎಂಪಿ ಮಾಜಿ ಸದಸ್ಯ ಎಸ್. ಉದಯ್ ಕುಮಾರ್ ತಿಳಿಸಿದರು.
ವರ್ತೂರು ವಾರ್ಡ್ ನ ಮಧುರ ನಾಗರ ಶ್ರೀ ಮಧುರಾಂಭಿಕ ದೇವಸ್ಥಾನದ ಬಳಿ ಶುಕ್ರವಾರ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಈ ಸ್ವಾತಂತ್ರ್ಯ ನಡಿಗೆ ನಡೆಯುತ್ತಿದೆ. ಆಗಸ್ಟ್ 15 ರಂದು ಮೆಜೆಸ್ಟಿಕ್ ನಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿಯಿಂದ ಬೃಹತ್ ಜಾಥಾ ನಡೆಸಲಿದ್ದೇವೆ. ಸುಮಾರು 5 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ. ಈ ಜಾಥಾಗೆ ನಮ್ಮ ಕ್ಷೇತ್ರದಿಂದ ಕನಿಷ್ಟ 5000 ಮಂದಿ ಪಾಲ್ಗೊಳ್ಳಲಿದ್ದೇವೆ ಎಂದರು.
ಈ ವೇಳೆ ವರ್ತೂರು ಬ್ಲಾಕ್ ಮಾಜಿ ಅಧ್ಯಕ್ಷ ಎನ್. ಜಯರಾಂ ರೆಡ್ಡಿ, ಅಧ್ಯಕ್ಷ ವಿ.ಟಿ.ಬಿ.ಬಾಬು, ಮಾರತಹಳ್ಳಿ ಬ್ಲಾಕ್ ಅಧ್ಯಕ್ಷ ಪಿ.ಎಸ್.ಬಾಬು, ಕೆಪಿಸಿಸಿ ಎಸ್.ಸಿ, ಎಸ್.ಟಿ ಘಟಕದ ಉಪಾಧ್ಯಕ್ಷ ನಾಗೇಶ್ ಟಿ, ವರ್ತೂರು ಬ್ಲಾಕ್ ಒಬಿಸಿ ಮಾಜಿ ಅಧ್ಯಕ್ಷ ಎಂಸಿಸಿ ರವಿ, ಮಹಿಳಾ ಬ್ಲಾಕ್ ಅಧ್ಯಕ್ಷೆ ಕವಿತಾ ರೆಡ್ಡಿ, ಮಾರತಹಳ್ಳಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ವನಜಾ ರೆಡ್ಡಿ ಮತ್ತಿತರರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ