ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ( ಸಿ.ಬಿ.ಎಸ್.ಇ ): ಸಂಸ್ಕೃತೋತ್ಸವ

Upayuktha
0

ಭಾರತದ ಹಲವು ಉತ್ಕೃಷ್ಟ ವಿಚಾರಗಳಲ್ಲಿ ಸಂಸ್ಕೃತವೂ ಒಂದು : ಸೂರ್ಯ ಹೆಬ್ಬಾರ


ಪುತ್ತೂರು: ಭಾರತ ದೇಶದಲ್ಲಿ ಹುಟ್ಟಿದ ನಮಗೆ ಪರಂಪರೆಯನ್ನು ತಿಳಿಯಲು ಒಂದು ಜನ್ಮ ಸಾಲದು. ಹಳೆಯ ಕಾಲದಿಂದ ಬಂದ ಹಲವು ಉತ್ಕೃಷ್ಟ ವಿಚಾರಗಳಲ್ಲಿ ಸಂಸ್ಕೃತವೂ ಒಂದು. ಹಿಂದಿನ ಕಾಲದಲ್ಲಿ ಸಂಸ್ಕೃತ ಇತ್ತು ಎಂದು ಸಂಸ್ಕೃತವನ್ನು ಆ ಕಾಲಕ್ಕೇ ಸೀಮಿತಗೊಳಿಸಬೇಕಿಲ್ಲ. ಯಾಕೆಂದರೆ ಸಂಸ್ಕೃತ ಈಗಲೂ ಇದೆ. ಸಂಸ್ಕೃತ ರತ್ನ ಇದ್ದ ಹಾಗೆ. ಆದರೆ ಅದನ್ನು ಬಳಸುವ ಕಲೆಯನ್ನು ನಾವು ಕರಗತ ಮಾಡಿಕೊಳ್ಳಬೇಕು ಎಂದು ಶೃಂಗೇರಿಯ ಸಂಭಾಷಣ ಸಂದೇಶ ಮಾಸಪತ್ರಿಕೆಯ ಸಹಾಯಕ ಸೂರ್ಯ ಹೆಬ್ಬಾರ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇಯಲ್ಲಿ ಮಂಗಳವಾರ ಆಯೋಜಿಸಲಾದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ಸಂಸ್ಕೃತದಲ್ಲಿ ವೇದ, ಮಂತ್ರ ಮಾತ್ರ ಇರುವುದಲ್ಲ, ಅದು ಒಂದು ಭಾಗ ಅಷ್ಟೇ. ಇನ್ನೊಂದು ಭಾಗವೇ ವಿಜ್ಞಾನ. ಅಗಸ್ತ್ಯ ಸಂಹಿತದಲ್ಲಿ ವಿದ್ಯುತ್ ಶಕ್ತಿಯ ಉಲ್ಲೇಖವಿದೆ ಎಂದರಲ್ಲದೆ ಸಂಸ್ಕೃತ ಕಲಿಯುವುದರಿಂದ ಭಾಷೆಯ ಸೊಗಸು ಮತ್ತಷ್ಟು ಹೆಚ್ಚಾಗುತ್ತದೆ. ಜತೆಗೆ ಸಂಸ್ಕೃತವನ್ನು ಕಲಿತರೆ ಅದು ಎಲ್ಲಾ ಭಾಷೆಗೂ ಪೂರಕವಾಗಿ ವ್ಯಕ್ತಿಯ ಭಾಷಾ ಸೌಂದರ‍್ಯವನ್ನು ವೃದ್ಧಿಸುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಎಲ್ಲಾ ಉತ್ಕೃಷ್ಟ ಗ್ರಂಥಗಳು ಭಾರತದಲ್ಲಿವೆ. ಅಷ್ಟೇ ಅಲ್ಲ ಸಂಸ್ಕೃತದಿಂದ ಕನ್ನಡವು ಉಗಮವಾಯಿತು. ಸಂಸ್ಕೃತ - ಸಂಸ್ಕೃತಿ ಕಡಿಮೆ ಆದ ಹಾಗೆ ಮಕ್ಕಳಲ್ಲಿನ ಜ್ಞಾನವು ಕೂಡ ಕಡಿಮೆಯಾಯಿತು ಹಾಗಾಗಿ ಸಂಸ್ಕೃತ ಜೀವಂತವಾಗಿ ಉಳಿಯಬೇಕು ಎಂದರು.


ಸಂಸ್ಕೃತೋತ್ಸವದ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ ಅಂಬಿಕ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲೆ ಮಾಲತಿ ಡಿ. ಭಟ್, ಸಂಸ್ಕೃತ ಉಪನ್ಯಾಸಕಿ ಸೌಂದರ್ಯ ಲಕ್ಷ್ಮಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೀರ್ ಸ್ವಾಗತಿಸಿ, ಮನ್ವಿತ್ ವಂದಿಸಿದರು, ಅದ್ವೈತ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top