ಉಜಿರೆ: ಶ್ರೀ ಧ. ಮಂ ಕಾಲೇಜಿನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜ ವಿತರಣಾ ಕಾರ್ಯಕ್ರಮ ನಡೆಯಿತು.
ಸ್ವಾತಂತ್ರ್ಯ ದಿನವನ್ನು ಸ್ಮರಣೀಯವಾಗಿಸುವ ಹೊಣೆ ನಮ್ಮದು ಎಂದು ಎಸ್.ಡಿ.ಎಂ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್. ಉದಯಚಂದ್ರರವರಿಗೆ ಸಾಂಕೇತಿಕವಾಗಿ ಧ್ವಜವನ್ನು ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಅಭಿಯಾನದ ನೇತೃತ್ವವನ್ನು ಹೊಂದಿರುವ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಯಾದ ಡಾ. ಲಕ್ಷ್ಮೀನಾರಾಯಣ ಕೆ. ಎಸ್ ಇವರು ಅಭಿಯಾನದ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಆದೇಶದಂತೆ ಹರ್ ಘರ್ ತಿರಂಗಾ ಎಂಬ ಪರಿಕಲ್ಪನೆಗೆ ಒತ್ತು ನೀಡಿ ಧ್ವಜವನ್ನು ವಿತರಿಸುತ್ತಿದ್ದು ಎಲ್ಲರೂ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಮನೆ, ಮನೆಯಲ್ಲಿ ಧ್ವಜವನ್ನು ಹಾರಿಸುವ ಮೂಲಕ ದೇಶಕ್ಕಾಗಿ ಪ್ರಾಣ ತೆತ್ತವರನ್ನು ನೆನೆಯುವ ಜೊತೆ ಜೊತೆಗೆ ಸ್ವಾತಂತ್ರ್ಯ ದಿನದ ನೆನಪನ್ನು ತಿರಂಗಾ ಹಾರಿಸುವ ಮೂಲಕ ಸ್ಮರಣೀಯವಾಗಿಸೋಣ ಎಂದು ಮನವಿ ಮಾಡಿದರು.
ನಂತರ ಕಾಲೇಜಿನ ಉಪಪ್ರಾಂಶುಪಾಲರಿಗೆ, ಕುಲಸಚಿವರುಗಳಿಗೆ, ವಿಭಾಗದ ಮುಖ್ಯಸ್ಥರುಗಳಿಗೆ, ಪ್ರಾಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಎನ್ಎಸ್ಎಸ್ ನ ಸ್ವಯಂಸೇವಕರಿಗೆ ಧ್ವಜವನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಅಧ್ಯಾಪಕರ ಸಂಘದ ಮೂಲಕ ಆಯೋಜಿಸಲಾಗಿತ್ತು. ಪ್ರಾಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಭಾಸ್ಕರ್ ಹೆಗ್ಡೆ ಉಪಸ್ಥಿತರಿದ್ದರು. ಯೋಜನಾಧಿಕಾರಿಯದ ಶ್ರೀಮತಿ ದೀಪ ಆರ್ ಪಿ ಅವರು ಸಹಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ