ಎಸ್.ಡಿ.ಎಂ ಪ.ಪೂ ಕಾಲೇಜು ಉಜಿರೆ: ಯೋಗ ಸಪ್ತಾಹ ಉದ್ಘಾಟನೆ

Chandrashekhara Kulamarva
0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಸ್ವಯಂ ಸೇವಕಿಯರಿಗೆ ನಡೆಸುವ  ಯೋಗ ಸಪ್ತಾಹ ಕಾರ್ಯಕ್ರಮವನ್ನು ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ಮೈತ್ರೇಯಿ ಬಾಲಕಿಯರ ವಸತಿ ನಿಲಯದಲ್ಲಿ  ಉದ್ಘಾಟಿಸಿದರು.


ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗವಿಜ್ಞಾನ ಹಾಗೂ ಪ್ರಕೃತಿ ಚಿಕಿತ್ಸಾ ವಿದ್ಯಾಲಯದ ಯೋಗ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಉದಯಸುಬ್ರಹ್ಮಣ್ಯ ಭಟ್ ಹಾಗೂ ಮೈತ್ರೇಯಿ ಬಾಲಕಿಯರ ವಸತಿ ನಿಲಯದ ಮುಖ್ಯ ಪಾಲಕರಾದ ಲಲಿತಾ ಅವರು ಅಭ್ಯಾಗತರಾಗಿ ಆಗಮಿಸಿ ಯೋಗದ ಮಹತ್ವ ತಿಳಿಸಿದರು.


ಯೋಗ ತರಬೇತಿ ನೀಡುವ ಡಾ. ವಿಶಾಖಾ ಭಂಡಾರ್ಕರ್ ಮತ್ತು ಪ್ರತೀಕ್ಷಾ ಭಟ್ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಉಪಸ್ಥಿತರಿದ್ದರು.


ಯೋಜನೆಯ ನಾಯಕಿಯರಾದ ವರ್ಧಿನೀ ಹಾಗೂ ಪ್ರಣಮ್ಯಾ ಜೈನ್ ಕಾರ್ಯಕ್ರಮ ಸಂಯೋಜನೆ ಮಾಡಿದ ಈ ಕಾರ್ಯಕ್ರಮದಲ್ಲಿ ದಿವ್ಯಶ್ರೀ ಸ್ವಾಗತಿಸಿ, ಶ್ರಾವಿ ಪರಿಚಯಿಸಿದರು. ಅಂಕಿತಾ ಆರ್ ನಿರೂಪಿಸಿ, ಧನ್ಯಾ ಅವರು ಧನ್ಯವಾದ ನೀಡಿದರು.



web counter

إرسال تعليق

0 تعليقات
إرسال تعليق (0)
To Top