ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 16 ರಿಂದ ಸೆಪ್ಟೆಂಬರ್ 23 ರ ತನಕ ಭಜನಾ ತರಬೇತಿ ಕಮ್ಮಟ

Upayuktha
0

(ಫೈಲ್‌ ಫೋಟೋ)


ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 24ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಸೆಪ್ಟೆಂಬರ್‌ 16ರಿಂದ 23 ರ ವರೆಗೆ ಸಂಯೋಜಿಸಲಾಗಿದೆ ಎಂದು ಭಜನಾ ಸಮಿತಿಯ ಸಂಚಾಲಕರಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ್ ತಿಳಿಸಿದ್ದಾರೆ.


ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಜಿಲ್ಲೆಗಳ ಆಯ್ದ ಭಜನಾ ಮಂಡಳಿಗಳ 200 ಮಂದಿ ಪುರುಷ ಮತ್ತು 50 ಮಂದಿ  ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಪಡೆಯಲು ಅವಕಾಶವಿದ್ದು, ಇವರಿಗೆ ಭಜನಾ ಪರಿಣಿತರಿಂದ ವಿಶೇಷ ತರಬೇತಿಯನ್ನು ನೀಡಲಾಗುವುದು.


ಕಮ್ಮಟದಲ್ಲಿ ದಾಸಸಾಹಿತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಅದನ್ನು ಭಜನಾ ರೂಪದಲ್ಲಿ ಹೇಳಿಕೊಡಲಾಗುತ್ತದೆ. ಅಲ್ಲದೇ ಪ್ರಾರ್ಥನಾ ಹಾಡುಗಳು, ವಚನ ಸಾಹಿತ್ಯಗಳ ತರಬೇತಿ ನೀಡಲಾಗುತ್ತದೆ.  ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳನ್ನು ಹೇಳಿಕೊಡಲಾಗುತ್ತದೆ. ನೃತ್ಯ ಭಜನಾ ಪರಿಣಿತರಿಂದ ನೃತ್ಯ ಭಜನೆ ಹೇಳಿಕೊಡಲಾಗುತ್ತದೆ. ಯೋಗಾಭ್ಯಾಸ, ಧ್ಯಾನಗಳ ತರಗತಿಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ವಿವಿಧ ವಿಷಯ ತಜ್ಞರಿಂದ ಒಂದು ಗಂಟೆಯ ಕಾಲ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. 


ಅರ್ಹತೆ:- ತರಬೇತಿಯಲ್ಲಿ ಭಜನಾ ಮಂಡಳಿಯ ಸದಸ್ಯರು ಮಾತ್ರ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ಅಭ್ಯರ್ಥಿಗಳು ಕನಿಷ್ಠ ಓದಲು, ಬರೆಯಲು ತಿಳಿದಿರಬೇಕು. 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು. ಕನಿಷ್ಠ ರಾಗ, ತಾಳ, ಜ್ಞಾನ ಹೊಂದಿರಬೇಕು ಮತ್ತು ಒಂದು ಮಂಡಳಿಯಿಂದ 2 ಸದಸ್ಯರಿಗೆ ಭಾಗವಹಿಸಲು ಅವಕಾಶವಿದೆ. ತರಬೇತಿ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.


ನೋಂದಾವಣೆ ಮಾಡಲು ಇಚ್ಚಿಸುವವರು ಮತ್ತು ಹೆಚ್ಚಿನ ಮಾಹಿತಿಗಾಗಿ  ತಮ್ಮ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದು.


ಹೆಚ್ಚಿನಮಾಹಿತಿಗಾಗಿ:- ಶ್ರೀ ಸುಬ್ರಹ್ಮಣ್ಯ ಪ್ರಸಾದ್ (9448869340) ಸಂಯೋಜಕರು, ಶ್ರೀ ಸುರೇಶ್ ಮೊಯಿಲಿ (9945922849) ಕಾರ್ಯದರ್ಶಿ, ಮತ್ತು ಧರ್ಣಪ್ಪ ಡಿ. (9449663417) ಕೋಶಾಧಿಕಾರಿ ಭಜನಾ ಕಮ್ಮಟ 2022 ಶ್ರೀ ಕ್ಷೇತ್ರ ಧರ್ಮಸ್ಥಳ ಇವರನ್ನು ಸಂಪರ್ಕಿಸಬಹುದಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top