ಉಜಿರೆ: ಶ್ರೀ ಧ. ಮಂ. ಪ. ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ಜೂನಿಯರ್ ರೆಡ್‍ಕ್ರಾಸ್ ವತಿಯಿಂದ 'ಡ್ರಗ್ ಬ್ಯಾಂಕ್' ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಉಪ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಬಿ. ಹಾಗೂ ಜೀವಶಾಸ್ತ್ರ ವಿಭಾಗದ ಅಧ್ಯಾಪಕರಾದ ಡಾ. ರಾಜೇಶ್ವರಿ ಕೆ. ಆರ್. ಇವರು ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ರಾಜೇಶ್ವರಿ ಕೆ.ಆರ್. ಇವರು 'ಡ್ರಗ್ ಬ್ಯಾಂಕ್' ಕಾರ್ಯಕ್ರಮದಲ್ಲಿ ನೆರೆದಿರುವ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿದರು. ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಜೂನಿಯರ್ ರೆಡ್‍ಕ್ರಾಸ್ ನ ಅಧ್ಯಕ್ಷರಾದ ಫ್ಲೇವಿಯಾ ಪೌಲ್ ಹಾಗೂ ಯುವ ರೆಡ್‍ಕ್ರಾಸ್‍ನ ಸಂಯೋಜಕರಾದ ಕವನಶ್ರೀ ಜೈನ್ ಇವರು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ಕಲಾವಿಭಾಗದ ವಿದ್ಯಾರ್ಥಿಯಾದ ಚೇತನ್ ಅವರು ನಿರೂಪಣೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ