'ರಿಕಾಲಿಂಗ್‌ ಅಮರ ಸುಳ್ಯ' ಕೃತಿ ಆ.24ರಂದು ಬಿಡುಗಡೆ

Upayuktha
0

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಣೆ



ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ 'ರಿಕಾಲಿಂಗ್ ಅಮರ ಸುಳ್ಯ' (Recalling Amara Sulya) ಕೃತಿ ನಾಡಿದ್ದು ಬುಧವಾರ (ಆ.24) ಬಿಡುಗಡೆಯಾಗಲಿದೆ.


ಉದಯೋನ್ಮುಖ ಲೇಖಕ, ಮಾಧ್ಯಮ ಪದವೀಧರ ಅನಿಂದಿತ್‌ ಗೌಡ ಕೊಚ್ಚಿ ಬಾರಿಕೆ ಅವರು ಈ ಕೃತಿಯ ಸಂಪಾದಕರು.


ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ತುಳು ವೀರರ ಬಲಿದಾನದ  'ಅಮರ ಸುಳ್ಯ' ಹೋರಾಟದ ಸಮಗ್ರ ಚಿತ್ರಣಗಳನ್ನು ಒಳಗೊಂಡ ಇಂಗ್ಲಿಷ್‌ ಲೇಖನಗಳ ಸಂಗ್ರಹ ಈ ಕೃತಿಯಲ್ಲಿದೆ. ಕೃತಿಯ ಸಂಪಾದಕರು ಅಮರ ಸುಳ್ಯ ಹೋರಾಟದ ಪ್ರಧಾನ ಭೂಮಿಕೆಯಲ್ಲಿದ್ದ ಕುಟುಂಬದ ಕುಡಿಯೂ ಹೌದು.


ಬುಧವಾರ ಸಂಜೆ 4:00 ಗಂಟೆಗೆ ಉರ್ವ ಸ್ಟೋರ್‌ನ ಅಶೋಕ ನಗರದ ತುಳು ಭವನ, ಸಿರಿಚಾವಡಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.


ಮಂಗಳೂರು ಮಹಾನಗರಪಾಲಿಕೆ ಮೆಯರ್‌ ಪ್ರೇಮಾನಂದ ಶೆಟ್ಟಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಅವರು ಪುಸ್ತಕದ ಪರಿಚಯ ಮಾಡಲಿದ್ದಾರೆ.


ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಯತಿಗಳಾದ ಪೂಜ್ಯ ಶ್ರೀ ಏಕಗಮ್ಯಾನಂದ ಸ್ವಾಮೀಜಿ, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷರಾದ ಕರ್ನಲ್‌ ಶರತ್‌ ಭಂಡಾರಿ ನಿಟ್ಟೆಗುತ್ತು  ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top