ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ರಕ್ಷಾಬಂಧನ ಕಾರ್ಯಕ್ರಮ, ಸಂಸ್ಕೃತ ದಿನಾಚರಣೆ

Upayuktha
0

ಮುಜುಂಗಾವು: ಪ್ರಥಮವಾಗಿ ದಿನಂಪ್ರತಿಯಂತೆ ರಾಮಾಯಣ ಮಾಸಾಚರಣೆ ನಿಮಿತ್ತ ರಾಮಾಯಣ ಕಥಾಭಾಗದ; ದಶರಥನ ನಿರ್ಯಾಣ ಹಾಗೂ ರಾಮ ಲಕ್ಷ್ಮಣಾದಿಗಳ ವನವಾಸ ಚಿತ್ರಕೂಟದ ವೃತ್ತಾಂತ ಕಥಾಭಾಗವನ್ನು ಚುಟುಕಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಂಭಟ್ ದರ್ಭೆಮಾರ್ಗ ಹೇಳಿದರು.


ಮುಂದೆ ಸಭಾವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಎಸ್.ಎನ್.ರಾವ್. ಮುನ್ನಿಪ್ಪಾಡಿ ಹಾಗೂಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ ಮುಜುಂಗಾವು ಇವರುಗಳು ಸಂಸ್ಕೃತ ದಿನಾಚರಣೆ ಮಕ್ಕಳಿಗೆ ವಿಶದವಾಗಿ ತಿಳಿಸಿದರು.


ಗ್ರಂಥಪಾಲಿಕೆ ವಿಜಯಾ ಸುಬ್ರಹ್ಮಣ್ಯ ಕುಂಬಳೆ; ಮಾತನಾಡುತ್ತಾ ಲೋಕದಲ್ಲಿ ಪಪ್ರಥಮವಾಗಿ ಮಹಾಭಾರತ ಕಥೆಯಲ್ಲಿ ದುರ್ಯೋಧನನ ಪತ್ನಿ ಭಾನುಮತಿ, ತನ್ನ ಪತಿ ದ್ರೌಪದಿಯನ್ನು ವರಿಸದಂತೆ ತಡೆಯುವುದಕ್ಕಾಗಿ ತಿಳಿಸಿ ಅವನು ಮರೆತುಹೋಗದಂತೆ ನೆನಪಿಸುವುದಕ್ಕಾಗಿ ಶ್ರೀಕೃಷ್ಣನಿಗೆ ರಾಖಿ ಕಟ್ಟಿದ ಕಥೆಯನ್ನು ಚುಟುಕಾಗಿ ಹೇಳಿದರು.


ಮುಖ್ಯೋಪಾಧ್ಯಾಯರಾದ ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ, ಅಧ್ಯಾಪಿಕೆ ಶ್ರೀಮತಿ ಚಿತ್ರಾಸರಸ್ವತಿ ಪೆರಡಾನ ಹಾಗೂ ಶಾಲಾ ಆಡಳಿತ ಸಮಿತಿ ಕೋಶಾಧಿಕಾರಿ ಶ್ರೀ ಚಂದ್ರಶೇಖರ ಭಟ್ ಎಯ್ಯೂರು, ಕಾರ್ಯದರ್ಶಿ ಶ್ರೀ ಶ್ಯಾಮರಾಜ ದೊಡ್ಡಮಾಣಿ ಇವರುಗಳು ರಕ್ಷಾಬಂಧನದ ಮಹತ್ವವನ್ನು ಶಾಲಾಮಕ್ಕಳಿಗೆ ತಿಳಿಸಿದರು. ಕೆಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಸ್ಕೃತ ಸುಭಾಷಿತವನ್ನು ಹೇಳಿದರು.


ಶಾಲಾವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಎದುರು-ಬದುರಾಗಿ ಕಳ್ಳಿರಿಸಿ. ಪರಸ್ಪರ ರಾಖಿ ಕಟ್ಟುವ ವಿಧಾನವನ್ನು ಸೂಚಿಸಲಾಯಿತು.

ಕಾರ್ಯಕ್ರಮ ನಿರೂಪಣೆಯನ್ನು ಅಧ್ಯಾಪಕ ಶ್ರೀಯುತ ಹರಿಪ್ರಸಾದ್ ಮಾಡಿದರು. ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top