ಬೆಂಗಳೂರು: ಬಿಎಂಎಸ್‌ ಮಹಿಳಾ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾ ದಿನಾಚರಣೆ ಇಂದು

Upayuktha
0


ಬೆಂಗಳೂರು: ನಗರದ ಬಸವನಗುಡಿಯಲ್ಲಿರುವ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಇಂದು ವಾರ್ಷಿಕ ಕ್ರೀಡಾ ದಿನಾಚರಣೆ ನಡೆಯುತ್ತಿದೆ.

ಕಾಲೇಜಿನ ಕ್ಯಾಂಪಸ್‌ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೈಕರ್‌ ಹಾಗೂ ಮಹಿಳಾ ಸಾಧಕಿ ಪ್ರಶಸ್ತಿ ಪುರಸ್ಕೃತ ಶ್ರೀಮತಿ ದಶಮಿ ರಾಣಿ ಸಿ.ಜೆ ಮತ್ತು ಅಂತಾರಾಷ್ಟ್ರೀಯ ನೆಟ್‌ ಬಾಲ್‌ ಆಟಗಾರ್ತಿ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಮೇಘನಾ ಜಗನ್ನಾಥ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾಲೇಜಿನ ಉದಯೋನ್ಮುಖ ಕ್ರೀಡಾ ಪ್ರತಿಭೆಗಳಿಗೆ ಶುಭ ಹಾರೈಸಿದರು.

ಬಿಎಂಎಸ್‌ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷರು ಹಾಗೂ ದಾನಿ ಟ್ರಸ್ಟಿಗಳಾದ ಡಾ ಬಿ.ಎಸ್‌. ರಾಗಿಣಿ ನಾರಾಯಣ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್‌ ಮಹಿಳಾ ಕಾಲೇಜು ಮತ್ತು ಬಿಎಂಎಸ್‌ ಶಿಕ್ಷಣ ಟ್ರಸ್ಟ್‌ನ ಎಲ್ಲ ಪ್ರಿನ್ಸಿಪಾಲರು, ಸಿಬ್ಬಂದಿ, ಕ್ರೀಡಾ ಕಾರ್ಯದರ್ಶಿ ಮತ್ತು ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡರು.


web counter

Post a Comment

0 Comments
Post a Comment (0)
To Top