ಬೆಂಗಳೂರು: ಬಿಎಂಎಸ್ ಶಿಕ್ಷಣ ದತ್ತಿ ನಡೆಸುತ್ತಿರುವ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ವಾರ್ಷಿಕೋತ್ಸವ- 'ಸಂಭವ 2022' - ಅ.14ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಬಿಎಂಎಸ್ ಎಂಜಿನಿಯರಿಂಗ್ ಮಹಾವಿದ್ಯಾಲಯದ ಒಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಹಾಗೂ ಮಿಸ್ಟರ್ ಕರ್ನಾಟಕ 2013ರ ಪ್ರಶಸ್ತಿ ಪುರಸ್ಕೃತ ಸೂರಜ್ ಗೌಡ, ಚಲನ ಚಿತ್ರ ನಟಿ ಧನ್ಯ ರಾಮ್‌ಕುಮಾರ್ ಮತ್ಉ ಜನಪ್ರಿಯ ಗಾಯಕ ಕಂಬದ ರಂಗಯ್ಯ ಅವರು ಪಾಲ್ಗೊಳ್ಳಲಿದ್ದಾರೆ.
ಬಿಎಂಎಸ್ ಸಮೂಹ ಸಂಸ್ಥೆಗಳ ದತ್ತಿ ದಾನಿಗಳು ಮತ್ತು ಅಧ್ಯಕ್ಷರಾದ ಡಾ. ಬಿ.ಎಸ್. ರಾಗಿಣಿ ನಾರಾಯಣ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಎಂಎಸ್ ಶಿಕ್ಷಣ ದತ್ತಿಯ ಆಜೀವ ದತ್ತಿ ದಾನಿಗಳಾದ ಡಾ. ಪಿ ದಯಾನಂದ ಪೈ, ದತ್ತಿಗಳಾದ ರವಿ ವೆಂಕಟೇಸಮ್, ಅವಿರಾಮ್ ಶರ್ಮ, ಸಿಂಡಿಕೇಟ್, ಬಿಸಿಯು ಮತ್ತು ಬಿಒಜಿ ಸದಸ್ಯರಾದ ಕರಣ್ ಕುಮಾರ್ ಅವರು ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.
ಪ್ರಾಂಶುಪಾಲರಾದ ಡಾ. ಸುಜಾತಾ ಡಿ, ಉಪ ಪ್ರಾಂಶುಪಾಲರು ಮತ್ತು ಡೀನ್ ಆಗಿರುವ ಡಾ. ವಸುಂಧರ ಡಿ.ಇ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜಿನ ಕುರಿತು:
ದೂರದೃಷ್ಟಿಯುಳ್ಳ ದಿವಂಗತ ಶ್ರೀ ಬಿ.ಎಸ್.ನಾರಾಯಣ್ ಅವರು ತಮ್ಮ ತಂದೆ ದಿವಂಗತ ಶ್ರೀ ಬಿ.ಎಂ. ಶ್ರೀನಿವಾಸಯ್ಯ ಅವರ ಸ್ಮರಣಾರ್ಥ 1964 ರಲ್ಲಿ ಮಹಿಳೆಯರಿಗಾಗಿ ಬಿ.ಎಂ.ಎಸ್. ಕಾಲೇಜನ್ನು ಪ್ರಾರಂಭಿಸಿದರು. ಶ್ರೀನಿವಾಸಯ್ಯ, ಲೋಕೋಪಕಾರಿ ಮತ್ತು ಶಿಕ್ಷಣತಜ್ಞರು. ಮಹಿಳೆಯರಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಲುವಾಗಿ, ಬಿ.ಎಂ.ಎಸ್. ಎಜುಕೇಷನಲ್ ಟ್ರಸ್ಟ್‌ನ ಅಡಿಯಲ್ಲಿ ಈ ಕಾಲೇಜನ್ನು ಸ್ಥಾಪಿಸಿದರು. ಇದು ದಕ್ಷಿಣ ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಕಾಲೇಜು ಒಂದಾಗಿದೆ. ಇದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿದೆ. ನ್ಯಾಕ್ ನಿಂದ 2004, 2009 ಮತ್ತು 2016 ರಲ್ಲಿ 'ಎ' ಗ್ರೇಡ್‌ನೊಂದಿಗೆ ಮೂರು ಬಾರಿ ಮಾನ್ಯತೆ ಪಡೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ೫೦ಕ್ಕೂ ಹೆಚ್ಚು ಅದ್ಭುತ ವರ್ಷಗಳ ಅನುಭವವನ್ನು ಹೊಂದಿರುವ ಕಾಲೇಜು. ಬಿ.ಎಸ್. ರಾಗಿಣಿ ನಾರಾಯಣ್, ದಾನಿ ಟ್ರಸ್ಟಿ, ಸದಸ್ಯ ಕಾರ್ಯದರ್ಶಿ, ಬಿ.ಎಂ.ಎಸ್.ಇ.ಟಿ ಮತ್ತು ಬಿ.ಎಂ.ಎಸ್ ಮಹಿಳಾ ಕಾಲೇಜಿನ ಅಧ್ಯಕ್ಷರು ಅವರ ಸಮರ್ಥ ಮಾರ್ಗದರ್ಶನದಲ್ಲಿ ಯುಂ ದರ ಮಟ್ಟದಲ್ಲಿ ತನ್ನ ಖ್ಯಾತಿಯನ್ನು ದೃಢವಾಗಿ ಸ್ಥಾಪಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ