ಮುಳಿಯ ಜ್ಯುವೆಲ್ಸ್ ವತಿಯಿಂದ ನೆರೆ ಸಂತ್ರಸ್ತರಿಗೆ 64,000 ರೂ ಮೌಲ್ಯದ ನೆರವಿನ ಕಿಟ್ ವಿತರಣೆ

Upayuktha
0

ಪುತ್ತೂರು: ಹೆಸರಾಂತ ಮುಳಿಯ ಜ್ಯುವೆಲ್ಸ್ ಸಂಸ್ಥೆ ವತಿಯಿಂದ ಸಾಮಾಜಿಕ ಕಾಳಜಿಯ ಭಾಗವಾಗಿ ಮೊನ್ನೆ ಸುಬ್ರಮಣ್ಯ ಪರಿಸರದಲ್ಲಿ ಉಂಟಾದ ನೆರೆಯ ಸಂತ್ರಸ್ತರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು. ಸುಮಾರು 64,000 ರೂ ಗಳ ಮೌಲ್ಯದ ಒಟ್ಟು 54 ಕಿಟ್ ಗಳನ್ನು ವಿತರಿಸಲಾಯಿತು. ನೂಚಿಲ, ಹರಿಹರ, ಪಲ್ಲತಡ್ಕ, ದೇವರಗದ್ದೆ, ಸುಬ್ರಮಣ್ಯ ಬಾಲ ಗದೆಗೇರಿ ಪ್ರದೇಶಗಳಿಗೆ ವಿತರಿಸಲಾಯಿತು.


ಈ ಸಂದರ್ಭದಲ್ಲಿ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಮೋಹನ್ ಸುಳ್ಳಿ ಮತ್ತು ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೆರೆ ಸಂತ್ರಸ್ತರಿಂದ ಮುಳಿಯ ಜ್ಯುವೆಲ್ಸ್‍ನ ಸಾಮಾಜಿಕ ಕಳಕಳಿ ಹಾಗೂ ಸೇವಾ ಬದ್ಯತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top