ಅಬ್ಬಾ! ಅಂತೂ ಮುಗೀತಪ್ಪ
ಪರೀಕ್ಷೆ ಬರೆಯೋ ಕಷ್ಟ!
ಓದು ಬರೆ ಅಂತಾರಪ್ಪ
ಯಾರಿಗೆ ಇದು ಇಷ್ಟ?!
ದೊಡ್ಡದೊಂದು ಹೊರೆಯನ್ನು
ಹೊತ್ತಂಗಿದ್ದೆವು ನಾವು
ಈಗ ಹಾರೋ ಹಕ್ಕಿಯಾದೆವು
ಹಗುರವಾಯ್ತು ಮನವು
ಹಗಲುರಾತ್ರಿ ಓದಿದೆವೆಷ್ಟು
ಬರೆಯುವುದಿಷ್ಟೇ ಇಷ್ಟು!
ತಿಂಗಳುದ್ದಕೂ ಕಲಿತದ್ದನ್ನು
ಬರೆಯಲು ಸ್ವಲ್ಪವೇ ಹೊತ್ತು
ಮೌನವೋ ಮೌನ ಬರೆಯುವಾಗ
ಎಲ್ಲರ ಮುಖದಲು ದುಃಖ
ಕಲಿತುದೆಲ್ಲಾ ಮರೆಯಾದನುಭವ
ಒಳಗೊಳಗೆ ಬಲು ನಡುಕ
ಪರೀಕ್ಷೆಗಂತಲೇ ಓದುವ ನಾವು
ಆಮೇಲದನು ಮರೆಯುವೆವು
ಅಂಕ ಪೂರ್ತಿ ಪಡೀಲೆಬೇಕು
ಇಲ್ಲಾಂದರೆ ನಾವ್ ಬುದ್ದುಗಳು
ಆಟ ಊಟ ಓಟವಷ್ಟೇ
ಇದ್ದರೆ ಸಾಲದೆ ನಮಗೆ?!
ಪರೀಕ್ಷೆಯನ್ನು ಬರೀಲೆ ಬೇಕೆ?
ದೊಡ್ಡವರಾಗಲು ನಾಳೆ!
-ಕವಿತಾ ಅಡೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ